ಬಂಗಾಳದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋಫಿಕ್ ಎಸ್‌ಕೆ ಅವರ ಖಾಸಗಿ ವಿಡಿಯೋ ವೈರಲ್ ಆದ ನಂತರ ಅವರ ಇನ್ಸ್‌ಸ್ಟಾಗ್ರಾಮ್ ಫಾಲೋವರ್‌ಗಳ ಸಂಖ್ಯೆ ಭಾರೀ ಏರಿಕೆಯಾಗಿದೆ. ಸ್ನೇಹಿತನಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದಾಗಿ ಹೇಳಿಕೊಂಡಿರುವ ಸೋಫಿಕ್, ವಿಡಿಯೋ ಹಂಚದಂತೆ ಮನವಿ ಮಾಡಿ ಕ್ಷಮೆಯಾಚಿಸಿದ್ದಾರೆ.
ನವದೆಹಲಿ (ನ.27): ಕಳೆದ ವಾರ ತನ್ನ ಗೆಳತಿಯ ಜೊತೆಗಿನ 15 ನಿಮಿಷದ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಬಂಗಾಳದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ದಸರ್ ಸೋಫಿಕ್ ಎಸ್‌ಕೆ ಅವರ ಇನ್ಸ್‌ಸ್ಟಾಗ್ರಾಮ್ ಫಾಲೋವರ್‌ಗಳ ಸಂಖ್ಯಯಲ್ಲಿ ಭಾರೀ ಏರಿಕೆ ಕಂದಿದೆ. ದಿ ಪಲ್ಲಿ ಗ್ರಾಮ್ ಟಿವಿ ಮೆಂಬರ್ ಆಗಿರುವ ಸೋಫಿಕ್, ಕ್ಷಮೆಯಾಚನೆ ವಿಡಿಯೋದಲ್ಲಿ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಹೇಳಿದ್ದರು. ಅಲ್ಲದೆ ವೈರಲ್ ಆಗಿರುವುದು ತಮ್ಮದೇ ಎಂಎಂಎಸ್ ಎಂದೂ ತಿಳಿಸಿದ್ದರು. ಅಂದಿನಿಂದ ಅವರು ತಮ್ಮ ನೈಜ ಫಾಲೋವರ್ಸ್‌ಗಳ ಬೆಂಬಲದೊಂದಿಗೆ ಸಹಜ ಸ್ಥಿತಿಗೆ ಮರಳಲು ಪ್ರಯತ್ನ ಮಾಡುತ್ತಿದ್ದಾರೆ.
ಎಂಎಂಎಸ್ ವಿವಾದದ ನಂತರ ಸೋಫಿಕ್ ಒಂದರ ನಂತರ ಒಂದರಂತೆ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈಗ ಅವರು ಇನ್ಸ್ಟಾಗ್ರಾಮ್ ನಲ್ಲಿ ಮತ್ತೊಂದು ವೀಡಿಯೊವನ್ನು ಹರಿಬಿಟ್ಟಿದ್ದಾರೆ.
ಇನ್ಸ್‌ಟಾಗ್ರಾಮ್‌ನಲ್ಲಿ 5 ಲಕ್ಷ ಫಾಲೋವರ್ಸ್ ಗುರಿ ಮುಟ್ಟಿದ ಸೋಫಿಕ್
ಸೋಫಿಕ್ ಎಸ್‌ಕೆ ಪಶ್ಚಿಮ ಬಂಗಾಳದಲ್ಲಿ ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಎಂಎಂಎಸ್ ವಿವಾದ ಆಗುವ ಮೊದಲು ಇನ್ಸ್‌ಟಾಗ್ರಾಮ್‌ನಲ್ಲಿ ಅವರ ಫಾಲೋವರ್‌ಗಳ ಸಂಖ್ಯೆ 4.63 ಲಕ್ಷ ಇತ್ತು. ಎಂಎಂಎಸ್ ವೈರಲ್ ಆಗಿದ್ದೇ ತಡ 5 ಲಕ್ಷ ಫಾಲೋವರ್ಸ್‌ಗಳ ಗಡಿಯನ್ನು ಒಂದೇ ವಾರದಲ್ಲಿ ದಾಟಿದ್ದಾರೆ. ಈ ಅವರ ಫಾಲೋವರ್ಸ್‌ಗಳ ಸಂಖ್ಯೆ 5.2 ಲಕ್ಷ ಆಗಿದೆ.
ಹೊಸ ವಿಡಿಯೋ ಪೋಸ್ಟ್ ಮಾಡಿದ ಸೋಫಿಕ್
ಎಂಎಂಎಸ್ ವಿವಾದದ ನಂತರದ ತನ್ನ ಮೂರನೇ ವೀಡಿಯೊದಲ್ಲಿ, ಸೋಫಿಕ್ ಎಸ್‌ಕೆ ಹಾಸಿಗೆಯಲ್ಲಿ ಮಲಗಿರುವ ವಿಡಿಯೋ ಪೋಸ್ಟ್ ಮಾಡಿದ್ದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದಾರೆ. ಹಿನ್ನೆಲೆಯಲ್ಲಿ 'ಅಮಾಕೆ ಅಮರ್ ಮೋಟೋನ್' ಬಂಗಾಳಿ ಹಾಡು ಕೇಳಿಬಂದಿದೆ. "ದುಃಖದ ಹಾಡು#ಸೋಫಿಕ್#ಹೊಸ ವೀಡಿಯೊ #ಹೊಸ ಪೋಸ್ಟ್#ಸೋಫಿಕ್" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಅಭಿಮಾನಿಗಳು, ಕಾಮೆಂಟ್ ಬಾಕ್ಸ್‌ನಲ್ಲಿ, ಅಳುವ ಎಮೋಜಿಗಳನ್ನು ಪೋಸ್ಟ್ ಮಾಡಿ ಸೋಫಿಕ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಎಂಎಂಎಸ್ ಹಗರಣಕ್ಕೆ ಕ್ಷಮೆ ಕೇರಿದ ಸೋಫಿಕ್
ಎಂಎಂಎಸ್ ವಿವಾದದ ನಂತರ ಒಂದು ವಿಡಿಯೋದಲ್ಲಿ, ಸೋಫಿಕ್ ಎಸ್‌ಕೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡು ಬಂಗಾಳಿ ಭಾಷೆಯಲ್ಲಿ, "ಈ ವಿಡಿಯೋ ಒಂದು ವರ್ಷಕ್ಕಿಂತ ಹಳೆಯದು, ಮತ್ತು ನಾನು ಈಗ ಬದಲಾಗಿದ್ದೇನೆ. ನಾನು ನನ್ನ ಕೆಲಸದ ಮೇಲೆ ಮಾತ್ರ ಗಮನಹರಿಸುತ್ತೇನೆ. ಆದರೆ, ನನ್ನ ಪ್ರಗತಿ ನೋಡಿ ಹೊಟ್ಟೆ ಉರಿದುಕೊಂಡ ಕೆಲವು ಸ್ನೇಹಿತರಿದ್ದಾರೆ. ನಾನು ಒಳ್ಳೆ ಕೆಲಸ ಮಾಡಬೇಕೆಂದು ಅವರು ಬಯಸೋದಿಲ್ಲ. ಅದಕ್ಕಾಗಿ ಅವರು ಈ ವಿಡಿಯೋ ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನನ್ನಲ್ಲಿರುವ ಖಾಸಗಿ ವಿಡಿಯೋ ಅವರಿಗೆ ಹೇಗೆ ಸಿಕ್ಕಿತು ಎಂದೂ ನೀವು ಕೇಳಬಹುದು. ಆದರೆ, ಈ ವಿಡಿಯೋ ನನ್ನ ಬಳಿ ಇದ್ದಿರಲಿಲ್ಲ. ಇದು ನನ್ನ ಗರ್ಲ್‌ಫ್ರೆಂಡ್ ಬಳಿ ಇತ್ತು. ನಾವು ಏನೋ ಶೂಟ್ ಮಾಡುತ್ತಿದ್ದೆವು. ಆಗ ನಮ್ಮಿಬ್ಬರ ಫೋನ್‌ಗಳನ್ನು ಸ್ನೇಹಿತನಿಗೆ ನೀಡಿದ್ದೆವು. ಅವನಿಗೆ ನಮ್ಮ ಪಾಸ್‌ವರ್ಡ್ ಕೂಡ ಗೊತ್ತಿತ್ತು. ಆತನನ್ನು ತುಂಬಾ ನಂಬಿದ್ದೆವು. ಆದ್ದರಿಂದ ಅವನಿಗೆ ಎಲ್ಲಾ ವಿಚಾರ ಹೇಳುತ್ತಿದ್ದೆವು. ಆದರೆ, ಆತ ನಮ್ಮ ಫೋನ್‌ಗಳಿಂದ ವಿಡಿಯೋ ತೆಗೆದುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಇದರಿಂದ ನಾನು ಸಿಟ್ಟಾಗಿ, ಆತನ ಜೊತೆಗಿನ ಎಲ್ಲಾ ಸಂಪರ್ಕ ನಿಲ್ಲಿಸಿದೆ. ಇದು ಆತನಿಗೆ ಕೋಪ ತರಿಸಿದ್ದರಿಂದ ಇದನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ನಾನು ಎಂದಿಗೂ ಊಹೆ ಮಾಡದ ವಿಚಾರವಾಗಿತ್ತು. ಅವನನ್ನು ನಾನು ಸಹೋದರ ಎಂದು ಭಾವಿಸಿದ್ದೆ. ಕಳೆದ ಕೆಲವು ದಿನಗಳಿಂದ ನಾನು ಆತನ ಜೊತೆಯಲ್ಲಿಯೇ ಇದ್ದೆ. ಆದರೆ, ಕ್ಲಿಪ್ ಪೋಸ್ಟ್ ಮಾಡುವ ಮುನ್ನ ಮುಂದೇನಾಗುತ್ತದೆ ಅನ್ನೋದನ್ನು ಯೋಚಿಸಲೇ ಇಲ್ಲ' ಎಂದು ಬೇಸರಪಟ್ಟುಕೊಂಡಿದ್ದಾರೆ.
ಹಾಗೇನಾದರೂ ಅವನು ನನಗೆ ಹೊಡೆದಿದ್ದರೆ, ನಾನು ಸಹಿಸಿಕೊಳ್ಳುತ್ತಿದೆ.ಆದರೆ ಅವನು ಈ ವೀಡಿಯೊವನ್ನು ಪೋಸ್ಟ್ ಮಾಡುತ್ತಾನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಕೆಲವರು ಇದನ್ನು ಕಟ್ಟುಕಥೆ ಎನ್ನಬಹುದು. ಅದಕ್ಕಾಗಿಯೇ ನಾನು ಕೆಲವು ಸಾಕ್ಷಿಗಳನ್ನು ನೀಡುತ್ತೇನೆ' ಎಂದು ಹೇಳಿದ ಸೋಫಿಕ್, ಸ್ನೇಹಿತನ ಕೆಲವು ವಿಡಿಯೋ ಹಾಗೂ ವಾಯ್ಸ್ ನೋಟ್‌ಗಳನ್ನು ಹಂಚಿಕೊಂಡಿದ್ದಾರೆ.
"ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರಲು ನಾನು ಬಯಸಲಿಲ್ಲ. ನಿಮ್ಮಲ್ಲಿ ಹಲವರು ನಾನು ಎಂಎಂಎಸ್ ಕ್ಲಿಪ್ ಅನ್ನು ವೈರಲ್ ಮಾಡಲು ಪೋಸ್ಟ್ ಮಾಡಿದ್ದೇನೆ ಎಂದು ಹೇಳಿದ್ದೀರಿ, ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಬಳಿ ಆ ವೀಡಿಯೊ ಇರಲಿಲ್ಲ. ಕೈಮುಗಿದು ಕ್ಷಮಿಸುವಂತೆ ನಾನು ವಿನಂತಿಸುತ್ತಿದ್ದೇನೆ. ವಿಡಿಯೋ ಮಾಡಿದ್ದೇ ನನ್ನ ಮೊದಲ ತಪ್ಪಾಗಿತ್ತು. ಅದನ್ನು ಮಾಡಲು ಬಿಡಬಾರದಿತ್ತು' ಎಂದು ಹೇಳಿದ ಸೋಫಿಕ್, ದಯವಿಟ್ಟು ವಿಡಿಯೋವನ್ನು ಹೆಚ್ಚಿನ ಪ್ರಸಾರ ಮಾಡದಂತೆ, ಇದ್ದಲ್ಲಿ ಡಿಲೀಟ್ ಮಾಡುವಂತೆ ವಿನಂತಿಸಿದ್ದಾರೆ.


