ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?

ಯಶ್​ಗೆ ಉರ್​ ತುಂಬಾ ದುಶ್ಮನ್​ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಯಶ್​ ಬೆಳೆದು ನಿಂತಿರೋ ರೀತಿ. ಯಶ್​ ಟಾಕ್ಸಿಕ್​ ಸಿನಿಮಾ ಇನ್ನೇನು ಬಿಡುಗಡೆ ಹೊಸ್ತಿಲಿನಲ್ಲಿದೆ. ಆದ್ರೆ ಆ ಸಿನಿಮಾವನ್ನ ಮಣ್ಣು ಮುಕ್ಕಿಸಬೇಕು ಅಂತ ಒಂದಷ್ಟು ಜನ ಹೊಂಚು ಹಾಕಿ ಕೂತಂತೆ ಕಾಣುತ್ತಿದೆ.

Share this Video
  • FB
  • Linkdin
  • Whatsapp

ದೊಡ್ಡ ಸುಳ್ಳು ಸುದ್ದಿ ಹಬ್ಬಿಸಿದ ಟಾಲಿವುಡ್​ ಜಗತ್ತು: 
ರಾಕಿಂಗ್ ಸ್ಟಾರ್ ಯಶ್​(Rocking Star Yash)​ ಇವತ್ತು ದೊಡ್ಡ ಸೂಪರ್ ಸ್ಟಾರ್.. ಹಾಲಿವುಡ್​​ ಜಗತ್ತೂ ಕೂಡ ಯಶ್​ರನ್ನ ಕರೆದು ಕೂರಿಸಿಕೊಂಡು ಸಂದರ್ಶನ ಮಾಡುತ್ತಿದೆ. ಅಲ್ಲಿಗೆ ಯಶ್​​​​ಗೆ ದುಶ್ಮನ್​​ಗಳು ಹುಟ್ಟಿಕೊಳ್ಳದೇ ಇರುತ್ತಾರಾ..? ಇದ್ದೇ ಇರ್ತಾರೆ ಅಲ್ವಾ.. ಈಗ ಟಾಕ್ಸಿಕ್​ಅನ್ನ ವಿಶ್ವದಾದ್ಯಂತಯ ತೆರೆಗೆ ತರೋಕೆ ಓಡಾಡುತ್ತಿರೋ ಯಶ್​ಗೆ ಪಕ್ಕದ ಮನೆಯೇ ದೊಡ್ಡ ದುಶ್ಮನ್​ ಆಗಿ ಕಾಡುತ್ತಿದೆ. ಹಾಗಾದ್ರೆ ಯಾವ್ದು ಆ ಪಕ್ಕದ ಮನೆ..? ಯಶ್​ ಮೇಲೆ ಯಾಕೆ ಅಷ್ಟೊಂದು ಶತೃತ್ವ..? ನೋಡೋಣ ಬನ್ನಿ..

ರಾಕಿಗೆ ಇದ್ದಾರಾ ಊರ್​ ತುಂಬಾ ದುಶ್ಮನ್..?
ರಾಕಿಂಗ್ ಸ್ಟಾರ್ ಯಶ್​ರ ಮಾಸ್ಟರ್ ಪೀಸ್ ಸಿನಿಮಾ ಡೈಲಾಗ್ ನಿಮಗೆಲ್ಲಾ ನೆನಪಿರಬಹುದು. ರಾಕಿ ಅಂದು ನಮ್ಮನ್ನ ಕಂಡ್ರೆ ಉರ್ಕೋಳ್ಳೋರು ಒಬ್ರಾ ಇಬ್ರಾ, ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ" ಅಂತ ಸಖತ್ ಆಗಿ ಡೈಲಾಗ್ ಹೊಡೆದಿದ್ರು...

ಪಕ್ಕದ ಮನೆಯಲ್ಲೇ ಇದ್ದಾರೆ ಯಶ್ ಗೆ ವಿರೋಧಿಗಳು: ಈ ಡೈಲಾಗ್ ಈಗ ಪದೇ ಪದೆ ಯಶ್ ನಿಜ ಜೀವನದಲ್ಲಿ ನಿಜ ಅನ್ನಿಸೋಕೆ ಶುರುವಾಗುತ್ತಿದೆ. ಯಶ್​ಗೆ ಉರ್​ ತುಂಬಾ ದುಶ್ಮನ್​ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಯಶ್​ ಬೆಳೆದು ನಿಂತಿರೋ ರೀತಿ. ಯಶ್​ ಟಾಕ್ಸಿಕ್​ ಸಿನಿಮಾ ಇನ್ನೇನು ಬಿಡುಗಡೆ ಹೊಸ್ತಿಲಿನಲ್ಲಿದೆ. ಆದ್ರೆ ಆ ಸಿನಿಮಾವನ್ನ ಮಣ್ಣು ಮುಕ್ಕಿಸಬೇಕು ಅಂತ ಒಂದಷ್ಟು ಜನ ಹೊಂಚು ಹಾಕಿ ಕೂತಂತೆ ಕಾಣುತ್ತಿದೆ. ಅದು ಬಾಲಿವುಡ್​​ನಿಂದ ಹಿಡಿದು ಟಾಲಿವುಡ್​ ವರೆಗೂ..

ಯಶ್​ಟಾಕ್ಸಿಕ್ ಬಗ್ಗೆ ಟಾಲಿವುಡ್ ನಲ್ಲಿ ಅಪ ಪ್ರಚಾರ..!
ಹೌದು, ನಟ ಯಶ್​​​​ ಬಾಕ್ಸಾಫೀಸ್​​ನ ಕಿಂಗ್​. ಯಶ್​ ಸಿನಿಮಾ ಬಂದ್ರೆ ಬೇರೆ ಸ್ಟಾರ್​ಗಳೆಲ್ಲಾ ಪಕ್ಕಕ್ಕೆ ಸರಿದು ಬಿಡ್ತಾರೆ. ಈಗ ಜೂನ್​​ 4ಕ್ಕೆ ಟಾಕ್ಸಿಕ್​​ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಅಷ್ಟರಲ್ಲಾಗೆ ಟಾಲಿವುಡ್​​ನಲ್ಲಿ ಟಾಕ್ಸಿಕ್​​ ಬಗ್ಗೆ ಅಪ ಪ್ರಚಾರ ಮಾಡೋ ದೊಡ್ಡ ನೆಟ್​ವರ್ಕ್​ ಒಂದು ಬೆಳೆದು ನಿಂತಿದೆ.

ಯಶ್​ಟಾಕ್ಸಿಕ್ ರಿಲೀಸ್ ಮುಂದಕ್ಕೆ ಹೋಯ್ತು; ದೊಡ್ಡ ಸುಳ್ಳು ಸುದ್ದಿ ಹಬ್ಬಿಸಿದ ಟಾಲಿವುಡ್​ ಜಗತ್ತು
ಸದ್ಯ 'ಟಾಕ್ಸಿಕ್' ಚಿತ್ರದಿಂದ ಟಾಲಿವುಡ್ ಮಂದಿಗೆ ಢವ ಢವ ಶುರುವಾಗಿದೆ. ಅದಕ್ಕೆ ಕಾರಣ ಅದೇ ತಿಂಗಳು ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಿಡುಗಡೆ ಆಗುತ್ತಿದೆ. 'ಟಾಕ್ಸಿಕ್' ರಾಯನ ಆರ್ಭಟದ ನಡುವೆ 'ಪೆದ್ದಿ' ಕಳೆದು ಹೋಗುವ ಭೀತಿ ಶುರುವಾದಂತೆ ಕಾಣುತ್ತಿದೆ. ಅದೇ ಕಾರಣಕ್ಕೆ ಈಗ 'ಟಾಕ್ಸಿಕ್' ವಿರುದ್ಧ ಟಾಲಿವುಡ್​ ಜಗತ್ತಿನಾಧ್ಯಂತ ನೆಗೆಟಿವ್ ಹಬ್ಬಿಸುವ ಕೆಲಸ ನಡೆಯುತ್ತಿದೆ. 
ಜೂನ್ 4ಕ್ಕೆ 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ, ಅದೇ ಕಾರಣಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

ಅಷ್ಟೆ ಅಲ್ಲ ಟಾಕ್ಸಿಕ್​ ಕ್ರೇಜ್​ ತೆಲುಗು ನಾಡಿನಲ್ಲಿ ಭಾರಿ ಜೋರಾಗಿದೆ. ಟಾಕ್ಸಿಕ್​ನ ಟೀಸರ್ ಬಂದಾಗ ಆಂದ್ರ, ಹೈದರಾಬಾದ್​​​​ ಟೆರಿಟೋರಿಯಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಆದ್ರೆ ಈಗ ರಾಮ್​ ಚರಣ್​ರ ಪೆದ್ದಿ ಟಾಕ್ಸಿಕ್​ ಜೊತೆ ಕಾಂಪೀಟ್ ಮಾಡೋ ಸೂಚನೆ ಬರುತ್ತಿದ್ದಂತೆ, ಟಾಕ್ಸಿಕ್ ಹವಾ ಕಡಿಮೆ ಆಗಿದೆ. ಟೀಸರ್​ ಸೋತಿದೆ ಅಂತ ಕೆಲ ತೆಲುಗು ಮಂದಿ ಯಶ್​ ಸಿನಿಮಾದ ಅಪಪ್ರಚಾರಕ್ಕೆ 
ಕೆಲವೇ ತಿಂಗಳ ಹಿಂದೆ ಬಾಲಿವುಡ್ ಮಂದಿ 'ರಾಮಾಯಣ' ಚಿತ್ರದ ವಿಚಾರದಲ್ಲಿ ಯಶ್ ಅವರನ್ನು ಕೆಳಗಿಳಿಸಿ ಮಾತನಾಡಿದ್ರು.

ರಾಮಾಯಣದಲ್ಲಿ ಕೆಲವೇ ನಿಮಿಷಗಳಷ್ಟೇ ಯಶ್ ಕಾಣಿಸಿಕೊಳ್ತಾರೆ. 'ರಾಮಾಯಣ' ಚಿತ್ರದಲ್ಲಿ ಯಶ್‌ಗೆ ಅವಕಾಶ ಕಮ್ಮಿ. ರಣ್ಬೀರ್ ದರ್ಬಾರ್ ಹೆಚ್ಚು ಎಂದು ಟ್ರೋಲ್ ಮಾಡಿದ್ರು. ಈಗ ತೆಲುಗುನಲ್ಲಿ ಟಾಕ್ಸಿಕ್​ಅನ್ನ ಬೀಳಿಸೋ ಹುನ್ನಾರ ಶುರುವಾಗಿದೆ. 120 ಕೋಟಿ ರೂ.ಗೆ ದಿಲ್ ರಾಜು 'ಟಾಕ್ಸಿಕ್' ಚಿತ್ರದ ತೆಲುಗು ರೈಟ್ಸ್ ಕೊಂಡುಕೊಂಡಿದ್ದಾರೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಅಲ್ಲಿ ಬಿಡುಗಡೆ ಆಗಲಿದ್ದು, ಆಡಿಕೊಳ್ಳೋರ ಬಾಯಿಗೆ ಅಂದು ಬಿಸಿ ತುಪ್ಪ ಟಾಕ್ಸಿಕ್ ಆಗಲಿದೆ
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video