ಅಂತರಿಕ್ಷದಲ್ಲೇ ಉಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್: ಭೂಮಿಗಿಂತ ವಿಭಿನ್ನ ವಾತಾವರಣ..ಎದುರಾಗಲಿದೆ ಆರೋಗ್ಯ ಸಮಸ್ಯೆ!

ಸ್ಟಾರ್ಲೈನರ್ ಸ್ಪೇಸ್ಕ್ರಾಫ್ಟ್ ಮೂಲಕ ಸುನೀತಾ ಬಾಹ್ಯಾಕಾಶ ಯಾನ 
ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರೋ ಸುನೀತಾ
ಬಾಹ್ಯಾಕಾಶ ನೌಕೆ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುತ್ತಿರೋ ನಾಸಾ 

First Published Jul 3, 2024, 12:13 PM IST | Last Updated Jul 3, 2024, 12:14 PM IST

ಗಗನಯಾತ್ರಿ ಸುನಿತಾ ವಿಲಿಯಮ್ಸ್‌ (Sunita Williams) ತಾಂತ್ರಿಕ ತೊಂದರೆಯಿಂದಾಗಿ ಭೂಮಿಗೆ ಮರಳಲು ವಿಳಂಬವಾಗಿದೆ. ಜೂನ್ 5ರಂದು ಬಾಹ್ಯಾಕಾಶ ನಿಲ್ದಾಣಕ್ಕೆ(space station) ಸುನಿತಾ ತೆರಳಿದ್ದರು. ಗಗನಯಾತ್ರಿ ಬುಚ್ ವಿಲ್ಮೋರ್ ಜತೆಗೆ ಬಾಹ್ಯಾಕಾಶ ಯಾನ ಆರಂಭಿಸಿದ್ದು, ಜೂನ್ 14ಕ್ಕೆ ಭೂಮಿಗೆ ಮರಳಬೇಕಿದ್ದ ಗಗನಯಾತ್ರಿಗಳು. ಗಗನಯಾತ್ರಿಗಳು ಮರಳಬೇಕಿದ್ದ ನೌಕೆಯಲ್ಲಿ ತಾಂತ್ರಿಕ (Technical issues) ತೊಂದರೆ ಉಂಟಾಗಿದೆ. ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆ ಸೇರಿ ಹಲವು ಅಡಚಣೆ ಉಂಟಾಗಿದೆ. ಗಗನಯಾತ್ರಿಗಳು ಭೂಮಿಗೆ ಮರಳುವ ಬಗ್ಗೆ ಹೆಚ್ಚಿದ ಅನಿಶ್ಚಿತತೆ ಇದ್ದು, ಈಗಾಗಲೇ ಭೂಮಿಗೆ ಹಿಂದಿರುಗುವ ದಿನಾಂಕ 2 ಬಾರಿ ಮುಂದೂಡಿಕೆ ಮಾಡಲಾಗಿದೆ. ಇನ್ನಷ್ಟು ದಿನ ಅಂತರಿಕ್ಷದಲ್ಲೇ ಕಾಲ ಕಳೆಯಬೇಕಿದೆ ಗಗನಯಾತ್ರಿಗಳು. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ಕಾಡಲಿದೆ ಹಲವಾರು ಸವಾಲು. ನಾಸಾ-ಬೋಯಿಂಗ್ ಸಹಯೋಗದಲ್ಲಿ ಬಾಹ್ಯಾಕಾಶ ಯೋಜನೆ ರೂಪಿಸಲಾಗಿದೆ.

ಇದನ್ನೂ ವೀಕ್ಷಿಸಿ:  ಸಿಎಂ ಕುಟುಂಬಕ್ಕೆ ಲಾಭ ಮಾಡಿಕೊಡಲು ಸೈಟ್ ಕೊಟ್ರಾ..? ಏನಿದು ಮುಡಾ ಗೋಲ್ಮಾಲ್..?