ಸಿಎಂ ಕುಟುಂಬಕ್ಕೆ ಲಾಭ ಮಾಡಿಕೊಡಲು ಸೈಟ್ ಕೊಟ್ರಾ..? ಏನಿದು ಮುಡಾ ಗೋಲ್ಮಾಲ್..?
ಮುಡಾ ನಿವೇಶನಗಳನ್ನು ರದ್ದು ಮಾಡಿ ತನಿಖೆಗೆ ಆದೇಶ
ಅಧಿಕಾರಿಗಳ ತಲೆದಂಡಕ್ಕೆ ಸಚಿವ ಬೈರತಿ ಸುರೇಶ್ ಸೂಚನೆ
ತನಿಖೆ ನಡೆಸಿ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ
ಮೈಸೂರು ಮುಡಾ ಸೈಟ್ ಹಂಚಿಕೆಯಲ್ಲಿ(MUDA site allotment) ಗೋಲ್‌ಮಾಲ್ ನಡೆದಿದ್ದು, ಸಿಎಂ ಸಿದ್ದರಾಮಯ್ಯ(Siddaramaiah ) ಪತ್ನಿ ಪಾರ್ವತಿಗೂ (Parvati)ನಿವೇಶನ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸೈಟ್ ಹಂಚಿಕೆಯಲ್ಲಿ ಮುಡಾ ಅಧಿಕರಿಗಳ ಕಳ್ಳಾಟ ಬಯಲಾಗಿದೆ. 1997ರಲ್ಲಿ ಸ್ವಾದೀನಪಡಿಸಿಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ. ಜಮೀನು ಕಳೆದುಕೊಂಡ ಬಡಾವಣೆಯಲ್ಲೇ ಖಾಲಿ ಸೈಟು ನೀಡದ ಆರೋಪ ಕೇಳಿಬಂದಿದೆ. ಬೆಲೆಬಾಳುವ ವಿಜಯನಗರ ಬಡಾವಣೆಯಲ್ಲಿ ಬೇರೆ ಸೈಟ್ ಇದ್ದು, ಸಿಎಂ ಕುಟುಂಬಕ್ಕೆ ಲಾಭ ಮಾಡಿಕೊಡಲು ಸೈಟ್ ಕೊಟ್ರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ನೀಡಿದ ಪರಿಹಾರದ ಬಗ್ಗೆ ಅನುಮಾನ ಮೂಡಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನು ಈ ಪ್ರಕರಣ ಸೃಷ್ಟಿಸಿದೆ. ಜಮೀನು ನನ್ನ ಪತ್ನಿಗೆ ತವರು ಮನೆ ಕಡೆಯಿಂದ ಬಂದಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ನಮಗೆ ಸೈಟ್ ಕೊಟ್ಟಿದ್ರು. ಕಾನೂನಿನ ಪ್ರಕಾರ 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಟೌನ್‌ನಲ್ಲಿ ಶ್ರೀಲೀಲಾಗೆ ಬಿಗ್ ಆಫರ್..! ಬಾಲಿವುಡ್ ಅಂಗಳಕ್ಕೆ ಹಾಯ್ ಎಂದ ಶ್ರೀಲೀಲಾ..!