ದಾವೂದ್ ಬಗ್ಗೆ ಸತ್ಯ ಮುಚ್ಚಿಟ್ಟಿತಾ ಪಾಕಿಸ್ತಾನ..? ಭೂಗತ ಪಾತಕಿಗೆ ಏನಾಗಿದೆ..? ಪಾಕ್ ಏನಂತಿದೆ..?

ಉಗ್ರರ ಸ್ವರ್ಗದಲ್ಲಿ ಕೋಲಾಹಲ ಸೃಷ್ಟಿಸಿದ ಸಾವಿನ ಸುದ್ದಿ..!
ಭಾರತದ ಮೋಸ್ಟ್ ವಾಂಟೆಡ್ಗೆ ಆಶ್ರಯ ಕೊಟ್ಟಿದ್ದೇಕೆ ಪಾಕ್..?
ನಟೋರಿಯಸ್ ಕ್ರಿಮಿನಲ್ ಗ್ಲೋಬಲ್ ಟೆರರಿಸ್ಟ್ ಆಗಿದ್ದು ಹೇಗೆ?

First Published Dec 19, 2023, 1:01 PM IST | Last Updated Dec 19, 2023, 1:01 PM IST

ಭಾರತಕ್ಕೆ ಬೇಕಿರೋ ನಂ.1 ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಂತ ಯಾರಾದ್ರೂ ಇದ್ರೆ, ಅದು ದಾವೂದ್(Dawood Ibrahim). ಆತನ ಬೇಟೆಗೆ ಸತತ ಎರಡೂವರೆ ದಶಕಗಳಿಂದಲೂ ಪ್ರಯತ್ನ ನಡೀತಾನೆ ಇದೆ. ಭಾರತದ(India) ನೆಲದಲ್ಲೇ ಹುಟ್ಟಿ ಇಲ್ಲೇ ಬೆಳೆದು ಕಡೆಗೆ ದೇಶಕ್ಕೆ ಕಂಟಕನಾದ ಮಹಾಪಾತಕಿ ಇವ್ನು. ಒಂದ್ ಕಾಲದಲ್ಲಿ ದಾವೂದ್ ಹೆಸರು ಕೇಳಿದ್ರೆನೇ ಕೆವರಲ್ಲಿ ಭಯ ಹುಟ್ಕೊಳೋದು. ಈ ಭೂಗತ ಪಾತಕಿ ಸೃಷ್ಟಿಸಿದ್ದ ವಾತಾವರಣ ಅಂಥದ್ದು. ಇವನು ದೇಶ ಬಿಟ್ಟು ಅದೆಷ್ಟೋ ವರ್ಷಗಳೇ ಕಳೆದಿದೆ. ಆದ್ರೆ, ಜಗತ್ತಿನ ಯಾವ್ದೋ ಮೂಲೇಲಿ ಕೂತು ಇವ್ನು ಬಟನ್ ಒತ್ತಿದ್ರೆ, ಭಾರತದಲ್ಲಿ ಕೋಲಾಹಲ ಸೃಷ್ಟಿಯಾಗ್ತಾ ಇತ್ತು. ಒಂದು ಘಟನೆ ದೇಶದಲ್ಲಿ ತಿಂಗಳುಗಟ್ಟಲೆ ನೆಮ್ಮದಿಗೆ ಕೊಳ್ಳಿ ಇಡ್ತಾ ಇತ್ತು. ಭಾರತದ ಪಾಲಿಗೆ ಪಕ್ಕಾ ವಿಲನ್ ಅಂತ ಯಾರಾದ್ರೂ ಇದ್ರೆ, ಅದು ಇವ್ನೇ. ಭಾರತವನ್ನ ನಡುಗಿಸೋದೇ ನನ್ನ ಫುಲ್ ಟೈಮ್ ಡ್ಯೂಟಿ ಅಂದ್ಕೊಂಡಿದ್ದ ದಾವೂದ್ ಇಬ್ರಾಹಿಂ ಬಗ್ಗೆ, ಈಗ ದಿಗ್ಭ್ರಾಂತಿ ಹುಟ್ಟಿಸೋ ಸಂಗತಿ ಬೆಳಕಿಗೆ ಬಂದಿದೆ. ಅದೇನು ಅಂದ್ರೆ, ನೂರಾರು ಜನರ ಪ್ರಾಣ ತೆಗೆದಿದ್ದವನು, ಇವನು ಸಾವು ಬದುಕಿನ ಮಧ್ಯೆ ಹೋರಾಡ್ತಾ ಇದಾನೆ ಅಂತ ವರದಿ ಹೇಳ್ತಾ ಇದೆ. ಉಗ್ರರ ಸ್ವರ್ಗ ಪಾಕಿಸ್ತಾನದಲ್ಲಿದ್ದ(Pakistan) ದಾವೂದ್, ನರಕ ಸೇರೋಕೆ ರೆಡಿಯಾಗ್ತಾ ಇದಾನೆ ಅಂತಿವೆ ವರದಿಗಳು.

ಇದನ್ನೂ ವೀಕ್ಷಿಸಿ:  ಕಾರ್ತಿಕ್ ಹೆಸರಿನಲ್ಲಿದ್ದ 13 ಎಕರೆ ಜಮೀನು ಬರೆಸಿಕೊಂಡ್ರಾ ದೊಡ್ಡ ಗೌಡರ ಮನೆಯ ಅಮ್ಮ- ಮಗ ?

Video Top Stories