ಕಾರ್ತಿಕ್ ಹೆಸರಿನಲ್ಲಿದ್ದ 13 ಎಕರೆ ಜಮೀನು ಬರೆಸಿಕೊಂಡ್ರಾ ದೊಡ್ಡ ಗೌಡರ ಮನೆಯ ಅಮ್ಮ- ಮಗ ?
ಮೈಸೂರಿನಲ್ಲಿ ನಡೆದ ಭವಾನಿ ಕಾರು ಆಕ್ಸಿಡೆಂಟ್ ಕೇಸ್‌ಗೂ ಕಿರಣ್ ರೆಡ್ಡಿಗೂ ಇದೆ ನಂಟು
ಪ್ರಭಾಕರ್ ರೆಡ್ಡಿ ಹೆಸರಲ್ಲಿದ್ದ ಕಾರನ್ನೇ ತನ್ನ ಸ್ನೇಹಿತನ ಕಾರು ಎಂದ್ದಿ ಭವಾನಿ ರೇವಣ್ಣ
ಕಾರಿಗೆ ಗುದ್ದಿದ ಬೈಕ್ ಸವಾರನನ್ನು ಹಿಗ್ಗಾಮುಗ್ಗ ಬೈದು ಸುದ್ದಿಯಾಗಿದ್ದ ಭವಾನಿ ರೇವಣ್ಣ
ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಫೋಟಕ ಸುದ್ದಿಯನ್ನು ಬಯಲು ಮಾಡುತ್ತಿದ್ದು, ಭವಾನಿ ರೇವಣ್ಣ(Bhavani Revanna), ಪುತ್ರ ಪ್ರಜ್ವಲ್ ರೇವಣ್ಣ(Prajwal Revanna) ಕಾರ್ತಿಕ್ ಎಂಬುವರ 13 ಎಕರೆ ಜಮೀನನ್ನು ಒತ್ತಾಯ ಪೂರ್ವಕವಾಗಿ ಬರೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಈ ಜಮೀನನ್ನು(Land) ಆಪ್ತನ ಮಗನಿಗೆ ಉಡುಗರೆಯಾಗಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಭವಾನಿ ರೇವಣ್ಣ ಆಪ್ತ, ಬಿಲ್ಡರ್ ಪ್ರಭಾಕರ್ ರೆಡ್ಡಿ ಪುತ್ರನ ಹೆಸರಲ್ಲಿ ಜಮೀನು ನೋಂದಣಿ ಮಾಡಲಾಗಿದೆಯಂತೆ. ಕಿರಣ್ ರೆಡ್ಡಿ ಹೆಸರಿಗೆ 13 ಎಕರೆ ಜಮೀನನ್ನು ಭವಾನಿ ರೇವಣ್ಣ ನೋಂದಣಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಮೈಸೂರಿನಲ್ಲಿ(Mysore) ನಡೆದ ಭವಾನಿ ಕಾರು ಆಕ್ಸಿಡೆಂಟ್ ಕೇಸ್‌ಗೂ ಕಿರಣ್ ರೆಡ್ಡಿಗೂ ನಂಟು ಇದೆ ಎನ್ನಲಾಗ್ತಿದೆ. ಪ್ರಭಾಕರ್ ರೆಡ್ಡಿ ಹೆಸರಲ್ಲಿದ್ದ ಕಾರನ್ನೇ ತನ್ನ ಸ್ನೇಹಿತನ ಕಾರು ಎಂದು ಭವಾನಿ ರೇವಣ್ಣ ಹೇಳಿದ್ದರಂತೆ. ಅದೇ ಕಾರಿನ ಮಾಲೀಕನ ಮಗನ ಹೆಸರಿಗೆ ಕಾರ್ತಿಕ್ ಜಮೀನು ನೋಂದಣಿ ಮಾಡಿಸಲಾಗಿದೆಯಂತೆ. ಗುತ್ತಿಗೆದಾರ ಪ್ರಭಾಕರ್ ರೆಡ್ಡಿ- ರೇವಣ್ಣ ಕುಟುಂಬಕ್ಕೂ ಹಲವು ವರ್ಷಗಳಿಂದ ನಂಟಿದೆಯಂತೆ. ಈ ಘಟನೆ ಕುರಿತು ಹಾಸನ ಎಸ್ಪಿ ಹಾಗೂ ಐಜಿಪಿಗೆ ಕಾರ್ತಿಕ್ ದೂರು ನೀಡಿದ್ದರಂತೆ. ದೂರು ಪಡೆದ ಹಿರಿಯ ಅಧಿಕಾರಿಗಳು FIR ದಾಖಲಿಸದೇ ವಿಚಾರಣೆಗೆ ಆದೇಶ ನೀಡಿದ್ದಾರಂತೆ. ಚನ್ನರಾಯಪಟ್ಟಣ ಡಿವೈಎಸ್ಪಿ ರವಿಪ್ರಸಾದ್ ರಿಂದ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ಬಳಿಕ ಕಾರ್ತೀಕ್ ಆರೋಪಕ್ಕೆ ಸೂಕ್ತ ಸಾಕ್ಷ ಇಲ್ಲ ಎಂದು ವರದಿ ಸಲ್ಲಿಕೆ ಮಾಡಲಾಗಿದೆಯಂತೆ.
ಇದನ್ನೂ ವೀಕ್ಷಿಸಿ: ಪ್ರೀತಿಸಿ ಪರಾರಿಯಾದ ಪ್ರೇಮಿಗಳು..ಯುವಕನ ಪೋಷಕರಿಗೆ ಥಳಿತ !