ಉಕ್ರೇನ್‌ಗೆ ಸಂಕಷ್ಟ ತಂದ ಡ್ಯಾಮ್: ಪ್ರವಾಹದ ಸುಳಿಯಲ್ಲಿ 42 ಸಾವಿರ ಜನ, ರಷ್ಯಾ ಕೈವಾಡ ಶಂಕೆ..?
ಉಕ್ರೇನ್ ದೇಶದ ಕಖೌಕಾ ಎಂಬ ಅಣೆಕಟ್ಟನ್ನು ರಷ್ಯಾ ಧ್ವಂಸ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ.
ರಷ್ಯಾ ಹಾಗೂ ಉಕ್ರೇನ್ ನಡುವೆ ಸಮರ ಇನ್ನೂ ನಡೆಯುತ್ತಲೇ ಇದೆ. ರಷ್ಯಾ ದೇಶವು ತನ್ನ ನಿಯಂತ್ರಣದಲ್ಲಿ ಇದ್ದ ಉಕ್ರೇನ್ ದೇಶದ ಕಖೌಕಾ ಎಂಬ ಅಣೆಕಟ್ಟನ್ನು ಧ್ವಂಸ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ. ಡ್ನಿಪ್ರೋ ಎಂಬ ನದಿಗೆ ಅಡ್ಡಲಾಗಿ ಕಟ್ಟಿದ್ದ ಈ ಅಣೆಕಟ್ಟಿನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿತ್ತು. ಆದ್ರೆ ರಷ್ಯಾದ ಅಧಿಕಾರಿಗಳು ಇದಕ್ಕೆ ಕಾರಣ ಉಕ್ರೇನಿಯನ್ ಮಿಲಿಟರಿ ದಾಳಿ ಎಂಬುದಾಗಿ ದೂಷಿಸಿದ್ದಾರೆ. ಅಣೆಕಟ್ಟಿನ ಕುಸಿತದಿಂದ ಮನೆಗಳು, ಬೀದಿಗಳು ಪ್ರವಾಹದ ತೀವ್ರತೆಗೆ ಕುಸಿದು ಹೋಗಬಹುದು ಎಂಬುದು ವರದಿಯಾಗಿದೆ ಅಂತೆಯೇ ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ತಂಪಾಗಿಸುವ ನೀರಿನ ಮಟ್ಟದ ಕ್ಷೀಣಿಸುವಿಕೆಗೆ ಈ ಪ್ರಕರಣ ಕಾರಣವಾಗಲಿದೆ. ಒಟ್ಟಿನಲ್ಲಿ ಈ ಡ್ಯಾಮ್‌ನಿಂದ ಉಕ್ರೇನ್‌ನಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಇದನ್ನೂ ವೀಕ್ಷಿಸಿ: ಶತ್ರುವಿನ ಶತ್ರು ಮಿತ್ರ.. ಏನಿದು ಕೇಸರಿ ಪಡೆಯ "ಲೋಕ" ಖೆಡ್ಡಾ..?: ಕರ್ನಾಟಕದಲ್ಲಿ ಗೌಡರ ದಾಳ.. ಆಂಧ್ರದಲ್ಲಿ ನಾಯ್ಡು ವ್ಯೂಹ..!