ಶತ್ರುವಿನ ಶತ್ರು ಮಿತ್ರ.. ಏನಿದು ಕೇಸರಿ ಪಡೆಯ "ಲೋಕ" ಖೆಡ್ಡಾ..?: ಕರ್ನಾಟಕದಲ್ಲಿ ಗೌಡರ ದಾಳ.. ಆಂಧ್ರದಲ್ಲಿ ನಾಯ್ಡು ವ್ಯೂಹ..!
ಜೆಡಿಎಸ್ ಜೊತೆ “ಲೋಕ” ಮೈತ್ರಿ..? ಕೈಗೆ ಕೇಸರಿ ಟಕ್ಕರ್..?
ಪೂರ್ವ.. ಪಶ್ಚಿಮ... ಉತ್ತರದಲ್ಲಿ ಹೇಗಿದೆ ಮೈತ್ರಿ ಪಾಲಿಟಿಕ್ಸ್..?
ದಕ್ಷಿಣದಲ್ಲಿ ದೊಡ್ಡ ಬೇಟೆಗೆ ಬಿಜೆಪಿ ಮಾಸ್ಟರ್‌ಪ್ಲಾನ್..!
ವಿಧಾನಸಭಾ ಚುನಾವಣೆ ಮುಗೀತು, ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದೂ ಆಯ್ತು. ಇನ್ನೇನಿದ್ರೂ ಲೋಕಸಭಾ ದಂಗಲ್. ಆ ದಂಗಲ್ ಯಾರಿಗೆ ಎಷ್ಟು ಇಂಪಾರ್ಟೆಂಟೋ ಗೊತ್ತಿಲ್ಲ. ಆದ್ರೆ ಪ್ರಧಾನಿ ಮೋದಿಯವವರಿಗಂತೂ ತುಂಬಾನೇ ಇಂಪಾರ್ಟೆಂಟ್. ಯಾಕಂದ್ರೆ ದೇಶದ ದಶದಿಕ್ಕುಗಳಲ್ಲೂ ಮೋದಿ ಸುತ್ತ ಶತ್ರುವ್ಯೂಹ ರೆಡಿಯಾಗ್ತಾ ಇದೆ. ಒಂದೊಂದು ದಿಕ್ಕಲ್ಲಿ ಒಂದೊಂದು ವ್ಯೂಹ. ಎಲ್ಲರ ಟಾರ್ಗೆಟ್ ಒಬ್ಬರೇ.. ರಣವಿಕ್ರಮ ನರೇಂದ್ರ ಮೋದಿ. ಲೋಕಸಭಾ ಚುನಾವಣೆಗಿನ್ನು ಕೇವಲ ಹನ್ನೊಂದೇ 11 ತಿಂಗಳುಗಳು ಬಾಕಿ ಇದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಕರ್ನಾಟಕದಲ್ಲಿ 28 ಸ್ಥಾನಗಳ ಪೈಕಿ 25ರಲ್ಲಿ ಗೆದ್ದು ಇತಿಹಾಸವನ್ನೇ ನಿರ್ಮಿಸಿ ಬಿಟ್ಟಿತ್ತು. ಆದ್ರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಪ್ರಚಂಡ ವಿಜಯದೊಂದಿಗೆ ಅಧಿಕಾರಕ್ಕೇರಿರೋ ಕಾಂಗ್ರೆಸ್, ಹೆಜ್ಜೆ ಹೆಜ್ಜೆಗೂ ಸವಾಲ್ ಹಾಕ್ತಾ ಇದೆ.
ಇದನ್ನೂ ವೀಕ್ಷಿಸಿ: ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ ಬಿಡುಗಡೆ: ಅರ್ಜಿಯಲ್ಲಿ ಏನಿದೆ ? ಕೊನೆಯ ದಿನಾಂಕ ಯಾವಾಗ ?