
ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
ಏಳೇ ಏಳು ನಿಮಿಷ.. ವಿಶ್ವವೇ ನಿಬ್ಬೆರಗು.. ಫ್ರಾನ್ಸ್ ತಲ್ಲಣ..! ಚಕ್ರವ್ಯೂಹವೇ ಛಿದ್ರ.. ಹಾಡಹಗಲೇ ಕೋಟಿ ಕೋಟಿ ಲೂಟಿ..! ಬೆಳ್ಳಂಬೆಳಗ್ಗೆ ದರೋಡೆಕೋರರ ದಾಂಗುಡಿ..! ಸ್ಕೂಟರ್.. ಕಟರ್.. ಏಣಿ.. ಎಂಟ್ರಿ.. ಮಹಾ ದರೋಡೆಯ ಕಹಾನಿ ಇಲ್ಲಿದೆ.
ಪ್ಯಾರಿಸ್ನ ಲೌವ್ರೆ ಮ್ಯೂಸಿಯಂನಲ್ಲಿ ಕಳ್ಳತನ ನಡೆದಿದೆ. ಬಾಲಿವುಡ್ ಧೂಮ್ ಸಿನಿಮಾ ಶೈಲಿಯಲ್ಲಿ ಈ ದರೋಡೆ ನಡೆದಿದೆ. ನೆಪೋಲಿಯನ್ ಕಾಲದ 9 ಆಭರಣ ಕಳ್ಳತನ ಮಾಡಲಾಗಿದೆ. ಈ ದರೋಡೆಗೆ ಜಗತ್ತೇ ಬೆಚ್ಚಿ ಬಿದ್ದಿದೆ. ಮ್ಯೂಸಿಯಂ ದರೋಡೆ ಪ್ರಕರಣವು ಫ್ರಾನ್ಸ್ನಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದ್ದು ಈ ಬಗ್ಗೆ ಅಲ್ಲಿನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಖದೀಮರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.