ದೇಶದ ಸೇನಾ ಶಕ್ತಿ ಹೆಚ್ಚಿಸುವುದೇ ಈ ಒಪ್ಪಂದ ?: ಅದೆಷ್ಟು ಶಕ್ತಿಶಾಲಿ GE-F414 ಫೈಟರ್ ಜೆಟ್.. MQ-9B ಡ್ರೋನ್‌..?

ಅಮೆರಿಕಾ ರಕ್ಷಣಾ ಸಂಸ್ಥೆಗೆ ಡ್ರೋನ್ ಮೇಲೆ ಹೆಚ್ಚಿನ ನಂಬಿಕೆ
ಆಕಾಶದಲ್ಲಿ ಮಾನವರಹಿತವಾಗಿ ಹಾರಾಡಬಲ್ಲ ಡ್ರೋನ್
40,000 ಅಡಿಗೂ ಹೆಚ್ಚು ಎತ್ತರ ಕಾರ್ಯನಿರ್ವಹಿಸಬಲ್ಲ ಡ್ರೋನ್

Share this Video
  • FB
  • Linkdin
  • Whatsapp

ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿಯಾಗಿ 9 ವರ್ಷಗಳಲ್ಲಿ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಅಮೆರಿಕಾಗೂ ಭೇಟಿ ನೀಡಿದ್ದಾರೆ. ಆದ್ರೆ, ಇಂದಿನ ಈ ಭೇಟಿ ಜಗತ್ತಿನಾದ್ಯಂತ ಸುದ್ದಿಯಾದಷ್ಟು ಇನ್ಯಾವ ಭೇಟಿಗಳು ಸುದ್ದಿಯಾಗಲಿಲ್ಲ.ನರೇಂದ್ರ ಮೋದಿ ಮತ್ತು ಭೈಡನ್ ಅವ್ರ ಈ ಭೇಟಿ ಇಷ್ಟೊಂದು ಸುದ್ದಿಯಾಗುತ್ತಿರುವುದೇಕಂದ್ರೆ, ಪ್ರಧಾನಿ ಮೋದಿಯವರ ಅಮೆರಿಕಾ ಪ್ರವಾಸದ ಮೇಲೆ ಅಮೆರಿಕಾದ ಶತ್ರುಗಳು ಮತ್ತು ಭಾರತದ ವೈರಿಗಳು ಇಬ್ಬರೂ ಕಣ್ಣಿಟ್ಟಿದ್ದಾರೆ. ಹೀಗಾಗಿ ಈ ಪ್ರವಾಸ ಇಷ್ಟೊಂದು ಸುದ್ದಿಯಾಗುತ್ತಿದೆ. ಬೈಡನ್ ಮತ್ತು ಮೋದಿ ಭೇಟಿ ತಮಗೆಷ್ಟು ಅಪಾಯಕಾರಿ ಅನ್ನೋದು ಅವ್ರಿಗೆಲ್ಲ ಗೊತ್ತಿತ್ತು. ಹೀಗಾಗಿ ಎರಡೂ ದೇಶದ ಶತ್ರುಗಳು ಈ ಪ್ರವಾಸದ ಮೇಲೆ ಕಣ್ಣಿಟ್ಟಿದ್ದಾರೆ.ಇಲ್ಲಿ ಶತ್ರುಗಳು ಊಹಿಸಿದಂತೆ ನಿಜ ಕೂಡ ಆಗಿದೆ. ನಿನ್ನೆ ಅಮೆರಿಕಾ ಮತ್ತು ಭಾರತದ ಮಧ್ಯೆ ಮಹತ್ವದ ರಕ್ಷಣಾ ಒಪ್ಪಂದವಾಗಿದೆ.ಈ ರಕ್ಷಣಾ ಒಪ್ಪಂದದಿಂದ ಎರಡೂ ದೇಶಗಳ ಶತ್ರುಗಳಿಗೆ ಈಗಲೇ ನಡುಕ ಹುಟ್ಟಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಜುಲೈಗಿಲ್ಲ ಅನ್ನಭಾಗ್ಯ, ಪ್ಲಾನ್ "ಸಿ" ವರ್ಕ್ ಆಗುತ್ತಾ?: ಅಕ್ಕಿವ್ಯೂಹ ಭೇದಿಸ್ತಾರಾ ಸಿಎಂ ಸಿದ್ದು ?

Related Video