ಜುಲೈಗಿಲ್ಲ ಅನ್ನಭಾಗ್ಯ, ಪ್ಲಾನ್ "ಸಿ" ವರ್ಕ್ ಆಗುತ್ತಾ?: ಅಕ್ಕಿವ್ಯೂಹ ಭೇದಿಸ್ತಾರಾ ಸಿಎಂ ಸಿದ್ದು ?

ಇವ್ರು ಬಿಡ್ತಿಲ್ಲ.. ಅವ್ರು ಕೊಡ್ತಿಲ್ಲ.. ಜೋರಾಯ್ತು ಅಕ್ಕಿ ದಂಗಲ್..!
ಅಮಿತ್ ಶಾ ಅಂಗಳಕ್ಕೆ ಅಕ್ಕಿಯುದ್ಧ.. ಸಿದ್ದುಗೆ "ಶಾ" ಹೇಳಿದ್ದೇನು..?
FCI ಶಾಕ್ ಬಗ್ಗೆ ಅಮಿತ್ ಶಾಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ..!

First Published Jun 23, 2023, 12:30 PM IST | Last Updated Jun 23, 2023, 12:30 PM IST

ಅನ್ನರಾಮಯ್ಯ ಖ್ಯಾತಿಯ ಸಿದ್ದರಾಮಯ್ಯನವರಿಗೆ ಅಕ್ಕಿ ಟೆನ್ಷನ್ ಶುರುವಾಗಿದೆ. ದುಡ್ಡಿದ್ರೂ ಕೊಡಲು ಅಕ್ಕಿ ಸಿಗ್ತಿಲ್ಲ.ಅಕ್ಕಿ ವ್ಯೂಹದಲ್ಲಿ ಸಿಕ್ಕಾಕಿಕೊಂಡಿರೋ ರಾಜ್ಯ ಸರ್ಕಾರದ ಮುಂದೆ ಹತ್ತಾರು ಚಾಲೆಂಜ್, ನೂರೆಂಟು ಸವಾಲುಗಳು ಇವೆ. ಇದೀಗ ಅಕ್ಕಿ ದಂಗಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಗಳಕ್ಕೂ ತಲುಪಿದೆ. ಇದ್ರ ಮಧ್ಯೆ ಜುಲೈ 1ರಂದು ಅನ್ನಭಾಗ್ಯ ಯೋಜನೆ ಜಾರಿಯಾಗಲ್ಲ ಅನ್ನೋ ಸುಳಿವು ಸಿಕ್ತಾ ಇದೆ. ಅನ್ನಭಾಗ್ಯದ ಗ್ಯಾರಂಟಿ ಕೊಟ್ಟೇ ಸಿದ್ದರಾಮಯ್ಯನವರು 2ನೇ ಬಾರಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಾರೆ. ಆದ್ರೆ ಸಿಎಂ ಕುರ್ಚಿ ಈ ಬಾರಿ ಅನ್ನರಾಮಯ್ಯನಿಗೆ ಹೂವಿನ ಹಾಸಿಗೆಯಲ್ಲ. ಕಾರಣ, ಅವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ದಿನಕ್ಕೊಂದು ಅಡ್ಡಿ ಆತಂಕಗಳು ಎದುರಾಗ್ತಾ ಇವೆ. ಅನ್ಯರಾಜ್ಯಗಳಿಂದ ಅಕ್ಕಿ ತರಿಸಲು ಪರದಾಟ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆಘಾತವನ್ನು ನೀಡಿದೆ.

ಇದನ್ನೂ ವೀಕ್ಷಿಸಿ: ಮತ್ತೆ ದೆಹಲಿಗೆ ತೆರಳಿದ ಸಚಿವ ಮುನಿಯಪ್ಪ: ಕೇಂದ್ರದಿಂದ ಅಕ್ಕಿ ತರಲು ಕೊನೆ ಕ್ಷಣದವರೆಗೆ ತಂತ್ರ !

Video Top Stories