ಬಿಎಂಟಿಸಿಗೆ ಮಹಿಳಾ ಸಾರಥಿ, ದೇಶದ ಮೊದಲ ಎಲೆಕ್ಟ್ರಿಕ್ ಬಸ್ ಚಾಲಕಿ ದುಗ್ಗಮ್ಮ
ಸ್ತ್ರೀ ಅಬಲೆಯಲ್ಲ..ಸಬಲೆ ಅನ್ನೋದು ಈಗಾಗ್ಲೇ ಸಾಬೀತಾಗಿದೆ. ಹೀಗಿರುವಾಗ ಇಲ್ಲೊಬ್ಬಾಕೆ ಮಹಿಳೆ ಯಾವ ಕೆಲಸಕ್ಕೂ ಸೈ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಎಲೆಕ್ಟ್ರಿಕ್ ಬಸ್‌ಗಳಿಗೂ ಮಹಿಳೆ ಸಾರಥಿಯಾಗಿದ್ದು,ದುಗ್ಗಮ್ಮ ದೇಶದ ಮೊದಲ ಎಲೆಕ್ಟ್ರಿಕ್ ಬಸ್ ಚಾಲಕಿಯೆಂದು ಗುರುತಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಹೆಣ್ಣು ಮನಸ್ಸು ಮಾಡಿದ್ರೆ ಯಾವ ಸಾಧನೆ ಬೇಕಿದ್ರೂ ಮಾಡ್ತಾಳೆ ಅನ್ನೋದಕ್ಕೆ ಇವರೇ ಉದಾಹರಣೆ. ಅವರೇ ನೋಡಿ ತುಮಕೂರಿನ ಪಾವಗಡ ಮೂಲದ ದುಗ್ಗಮ್ಮ.ಇವರು ದೇಶದಲ್ಲೇ ಮೊದಲ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ..ನಿರ್ಭಯ ಸ್ಕೀಂ ಅಡಿಯಲ್ಲಿ ಬಿಎಂಟಿಸಿ ಬಸ್ ತರಬೇತಿ ಪಡೆದು ಪರವಾನಿಗೆ ಪಡೆದಿದ್ದರು. ಸದ್ಯ ಎಲೆಕ್ಟ್ರಿಕ್ ಬಸ್ ಟ್ರೈನಿಂಗ್ ಪಡೆಯುತ್ತಿರುವ ದುಗ್ಗಮ್ಮ ಬಿಎಂಟಿಸಿ ಬಸ್ ಸ್ಟೇರಿಂಗ್ ಹಿಡಿದು ರಸ್ತೆಗಿಳಿಯಲಿದ್ದಾರೆ.
ಪ್ರೀತಿಸಿ ಮದುವೆಯಾದವಳನ್ನು ಕೊಂದ ಗಂಡ: ಪಾಪಿಯ ಅನುಮಾನಕ್ಕೆ ಗರ್ಭಿಣಿ ಬಲಿ