ಬಾಣಂತಿಗೆ ಎಷ್ಟು ತಿಂಗಳ ಆರೈಕೆ ಬೇಕು? ತಜ್ಞರು ಕೊಟ್ಟಿರೋ ಮಾಹಿತಿ ಇಲ್ಲಿದೆ..

ಗರ್ಭಾವಸ್ಥೆಯಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದರಲ್ಲೂ ಗರ್ಭಿಣಿಗೆ ಮೊದಲ ಮೂರು ತಿಂಗಳು ತುಂಬಾ ಮುಖ್ಯ ಎಂದು ಹೇಳುತ್ತಾರೆ. ಅದ್ಯಾಕೆ?

First Published Sep 23, 2023, 3:45 PM IST | Last Updated Sep 23, 2023, 3:45 PM IST

ತಾಯ್ತನ ಅನ್ನೋದು ಪ್ರತಿ ಹೆಣ್ಣಿನ ಜೀವನದಲ್ಲೂ ಅತ್ಯಂತ ಮಹತ್ವವಾದ ಸಮಯವಾಗಿದೆ. ಮಗುವಿಗೆ ಜನ್ಮ ನೀಡುವುದು ಆಕೆಯ ಪಾಲಿಗೆ ಪುರ್ನಜನ್ಮವಿದ್ದಂತೆ ಎಂದೇ ಎಲ್ಲರೂ ಹೇಳುತ್ತಾರೆ. ಯಾಕೆಂದರೆ ಕೆಲವೊಮ್ಮೆ ಹೆರಿಗೆಯ ಸಂದರ್ಭದಲ್ಲಿ ಮಗುವಿಗೆ ಅಥವಾ ತಾಯಿಯ ಜೀವಕ್ಕೆ ಅಪಾಯವಾಗುವುದೂ ಇದೆ. ಹೀಗಾಗಿ ಗರ್ಭಧಾರಣೆಯ ಸಂದರ್ಭ ಮಹಿಳೆ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಸುರಕ್ಷಿತ ತಾಯ್ತನವನ್ನು ಪ್ರತಿಯೊಬ್ಬ ಮಹಿಳೆಯರೂ ಬಯಸ್ತಾರೆ. ಆದರೆ ಅದಕ್ಕಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದೂ ಮುಖ್ಯ.  ಬಾಣಂತಿ ಆರೋಗ್ಯವಾಗಿರಲು ಎಷ್ಟು ತಿಂಗಳ ಆರೈಕೆ ಬೇಕು. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಅರುಣಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಡಯಟ್‌ನಿಂದ ಗರ್ಭಿಣಿ ಶುಗರ್‌ ಕಡಿಮೆ ಮಾಡಿಕೊಳ್ಬೋದಾ?

Video Top Stories