Asianet Suvarna News Asianet Suvarna News

ಗರ್ಭ ಧರಿಸುವ ಮೊದಲೇ ವ್ಯಾಯಾಮ ಮಾಡಬೇಕಾ? ತಜ್ಞರು ಏನಂತಾರೆ

ವ್ಯಾಯಾಮ ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಆದರೆ ಗರ್ಭಾವಸ್ಥೆಯಲ್ಲಿ ಮಹಿಳೆಯರು ವ್ಯಾಯಾಮ ಮಾಡಬಹುದಾ? ಈ ಬಗ್ಗೆ ತಜ್ಞರು ಏನಂತಾರೆ ತಿಳಿಯೋಣ.

ತಾಯ್ತನ ಅನ್ನೋದು ಪ್ರತಿ ಹೆಣ್ಣಿನ ಜೀವನದಲ್ಲೂ ಅತ್ಯಂತ ಮಹತ್ವದ್ದಾಗಿದೆ. ಒಂಭತ್ತು ತಿಂಗಳುಗಳ ಕಾಲ ಮಗುವೊಂದನ್ನು ಗರ್ಭದಲ್ಲಿಟ್ಟು, ಎಲ್ಲಾ ನೋವನ್ನು ಸಹಿಸಿಕೊಂಡು, ಅದಕ್ಕೆ ಜನ್ಮ ನೀಡುವುದು ಆಕೆಯ ಪಾಲಿಗೆ ಪುರ್ನಜನ್ಮವಿದ್ದಂತೆ ಎಂದೇ ಎಲ್ಲರೂ ಹೇಳುತ್ತಾರೆ. ಕೇವಲ ಗರ್ಭಾವಸ್ಥೆಯಲ್ಲಿ ಮಾತ್ರವಲ್ಲ ತಾಯಿಯಾಗುವ ಮೊದಲು ಸಹ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವೊಬ್ಬರು ಗರ್ಭಾವಸ್ಥೆಯಲ್ಲಿ ಮಹಿಳೆಯರು ವ್ಯಾಯಾಮ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಇದು ಸಹಜ ಹೆರಿಗೆಗ ನೆರವಾಗುತ್ತದೆ ಎಂದು ತಿಳಿಸುತ್ತಾರೆ. ಮತ್ತೆ ಕೆಲವರು ಗರ್ಭ ಧರಿಸುವ ಮೊದಲೇ ವ್ಯಾಯಾಮ ಮಾಡಬೇಕು ಎನ್ನುತ್ತಾರೆ. ಇದರಲ್ಲಿ ಯಾವುದು ನಿಜ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಅರುಣಾ ಮುರಳೀಧರ್ ನೀಡಿದ್ದಾರೆ.

ಗರ್ಭಾವಸ್ಥೆಯಲ್ಲಿ ಪದೇ ಪದೇ ಸ್ಕ್ಯಾನ್‌ ಮಾಡಿಸಿದ್ರೆ ಮಗುವಿಗೆ ತೊಂದ್ರೆಯಾಗುತ್ತಾ?

Video Top Stories