ಗರ್ಭಾವಸ್ಥೆಯಲ್ಲಿ ಪದೇ ಪದೇ ಸ್ಕ್ಯಾನ್ ಮಾಡಿಸಿದ್ರೆ ಮಗುವಿಗೆ ತೊಂದ್ರೆಯಾಗುತ್ತಾ?
ಹಿಂದಿನ ಕಾಲದಿಂದಲೂ ಗರ್ಭಿಣಿ ಹೆಚ್ಚು ಸ್ಕ್ಯಾನ್‌ಗೆ ಒಳಪಡಬಾರದು ಅನ್ನೋ ಮಾತಿದೆ. ಈಗ ಕಾಲ ಬದಲಾಗಿದ್ದರೂ ಜನರು ಸ್ಕ್ಯಾನ್ ಮಾಡೋಕೆ ಭಯಪಡುತ್ತಾರೆ. ಆದ್ರೆ ಸ್ಕ್ಯಾನ್ ಮಾಡೋದ್ರಿಂದ ತಾಯಿ-ಮಗುವಿನ ಆರೋಗ್ಯಕ್ಕೆ ತೊಂದ್ರೆಯಾಗುತ್ತೆ ಅನ್ನೋದು ಎಷ್ಟು ನಿಜ?
ಗರ್ಭಾವಸ್ಥೆಯಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಹಿಂದಿನ ಕಾಲದಿಂದಲೂ ಗರ್ಭಿಣಿ ಹೆಚ್ಚು ಸ್ಕ್ಯಾನ್‌ಗೆ ಒಳಪಡಬಾರದು ಅನ್ನೋ ಮಾತಿದೆ. ಈಗ ಕಾಲ ಬದಲಾಗಿದ್ದರೂ ಜನರು ಸ್ಕ್ಯಾನ್ ಮಾಡೋಕೆ ಭಯಪಡುತ್ತಾರೆ. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಅಪಾಯವಾಗಬಹುದು ಎಂದು ಅಂದುಕೊಳ್ಳುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ. ಸ್ಕ್ಯಾನ್ ಮಾಡೋದ್ರಿಂದ ಮಗುವಿನ ಆರೋಗ್ಯಕ್ಕೆ ತೊಂದ್ರೆಯಾಗುತ್ತಾ? ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಅರುಣಾ ಈ ಬಗ್ಗೆ ಮುರಳೀಧರ್ ಮಾಹಿತಿ ನಿಡಿದ್ದಾರೆ.