Weekly-Horoscope: ಈ ರಾಶಿಯವರಿಗೆ ಪ್ರೇಮದ ವಿಚಾರದಲ್ಲಿ ಬೇಸರವಾಗಲಿದ್ದು, 12 ರಾಶಿಗಳ ಭವಿಷ್ಯ ಹೀಗಿದೆ..
ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
ಅಕ್ಟೋಬರ್ 30 ಅಂದರೆ ಸೋಮವಾರ ರಾಹು-ಕೇತು ಪರಿವರ್ತನೆ ಆಗಲಿದೆ. ನವೆಂಬರ್ 1 ರಂದು ಬುಧವಾರ ಕನ್ನಡ ರಾಜೋತ್ಸವ ಇದೆ. ನವೆಂಬರ್ 2 ರಂದು ಗುರುವಾರ ಶುಕ್ರಗ್ರಹ ಸಂಕ್ರಮಣವಿದ್ದು, ಹಾಸನಾಂಬಾ ದರ್ಶನಾರಂಭವಾಗಲಿದೆ. ಈ ವಾರ ಮೇಷ ರಾಶಿಯವರಿಗೆ ಸಜ್ಜನರ ಸಹವಾಸ ಕಳೆದುಹೋಗಲಿದೆ. ತಂದೆ ಮಕ್ಕಳಲ್ಲಿ ಮನಸ್ತಾಪ ಬರಲಿದೆ. ವೃತ್ತಿಯಲ್ಲಿ ಅನುಕೂಲವಿದ್ದು, ಹಣ ನಷ್ಟವಾಗಲಿದೆ. ದಾಂಪತ್ಯ- ಪ್ರೇಮದ ವಿಚಾರದಲ್ಲಿ ಬೇಸರವಾಗಲಿದೆ. ಈ ರಾಶಿಯವರು ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ. ಇನ್ನೂ ವೃಷಭ ರಾಶಿಯವರಿಗೆ ವಿದೇಶ ವ್ಯವಹಾರಗಳಲ್ಲಿ ಲಾಭವಿದ್ದು, ವೃತ್ತಿಯಲ್ಲಿ ಕಿರಿಕಿರಿ ಉಂಟಾಗಲಿದೆ. ವೃತ್ತಿಯಲ್ಲಿ ಅನುಕೂಲವಿದ್ದು, ಮುಖ್ಯ ವಸ್ತುಗಳು ಕಾಣೆಯಾಗುತ್ತವೆ. ಉದರ ಬಾಧೆ ಉಂಟಾಗಲಿದ್ದು, ಪ್ರೀತಿ ಪ್ರೇಮ ವಿಚಾರದಲ್ಲಿ ಮನಸ್ತಾಪಬರಲಿದೆ. ಸ್ತ್ರೀಯರಿಗೆ ಬಲವಿದ್ದು, ಈ ರಾಶಿಯವರು ದುರ್ಗಾ ಸನ್ನಿಧಾನಕ್ಕೆ ಅವರೆ ಧಾನ್ಯ ದಾನ ಮಾಡಿ.
ಇದನ್ನೂ ವೀಕ್ಷಿಸಿ: ಎಮಿನೆಂಟ್ ಇಂಜಿನಿಯರ್ ಅವಾರ್ಡ್ ಕಾರ್ಯಕ್ರಮ: ಸಾಧನೆಗೈದ 25 ಇಂಜಿನಿಯರ್‌ಗಳಿಗೆ ಗೌರವ