Weekly-Horoscope: ದೀಪಾವಳಿ ಹಬ್ಬದ ವಿಶೇಷತೆ ಏನು ? ಈ ವಾರದ ಭವಿಷ್ಯ ಹೀಗಿದೆ..

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

Share this Video
  • FB
  • Linkdin
  • Whatsapp

ಈ ವಾರದ ವಿಶೇಷ ಹೀಗಿದ್ದು, ನವೆಂಬರ್ 12 ಅಂದರೆ ಭಾನುವಾರ- ನರಕ ಚತುರ್ದಶಿ ಇದ್ದು, ಅಮಾವಾಸ್ಯೆ ಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಮಾದೇಶ್ವರ ಬೆಟ್ಟದಲ್ಲಿ ಜಾತ್ರೆ ಪ್ರಾರಂಭವಾಗುತ್ತದೆ. ನವೆಂಬರ್ 13 - ಸೋಮವಾರ - ದೀಪಾವಳಿ ಅಮಾವಾಸ್ಯೆ ಇದೆ. ನವೆಂಬರ್ 14 - ಮಂಗಳವಾರ - ಬಲಿಪಾಡ್ಯಮಿ ಇದ್ದು, ನವೆಂಬರ್ 16 - ಗುರುವಾರ - ವೃಶ್ಚಿಕ ರಾಶಿಗೆ ಕುಜ ಸಂಕ್ರಮಣ ಇದೆ. ನವೆಂಬರ್ 17 - ಶುಕ್ರವಾರ - ವೃಶ್ಚಿಕ ರಾಶಿಗೆ ಸೂರ್ಯ ಸಂಕ್ರಮಣವಾಗಲಿದೆ. ಈ ವಾರ ಮೇಷ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲವಿದ್ದು, ಅನಗತ್ಯ ವ್ಯಯದ ದಿನವಾಗಿದೆ. ದಾಂಪತ್ಯದಲ್ಲಿ ಮನಸ್ತಾಪಗಳು, ವ್ಯಾಪಾರದಲ್ಲಿ ಹಿನ್ನಡೆ ಆಗಲಿದೆ. ವಾರ ಮಧ್ಯದಲ್ಲಿ ವೃತ್ತಿಯಲ್ಲಿ ತೊಡಕಿದ್ದು, ಪೂಜಾಕಾರ್ಯಗಳಲ್ಲಿ ತೊಂದರೆ. ಮಾನಸಿಕ ಖಿನ್ನತೆ ಕಾಡಲಿದೆ. ವಾರಾಂತ್ಯದಲ್ಲಿ ಮಾನಸಿಕ ದುರ್ಬಲತೆ, ಸ್ತ್ರೀಯರಿಗೆ ಒತ್ತಡ, ವಸ್ತು ನಷ್ಟದ ನೋವು , ಅಸಮಾಧಾನದ ದಿನವಾಗಿರಲಿದೆ. ಈ ರಾಶಿಯವರು ಪರಿಹಾರಕ್ಕೆ ನರಸಿಂಹ ಪ್ರಾರ್ಥನೆ ಮಾಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಅಲ್ಲು ಅರವಿಂದ್, ರವಿ ತೇಜಾಗೆ ತಿರುಗೇಟು ನೀಡಿದ ಯಶ್ ಫ್ಯಾನ್ಸ್..!

Related Video