ಎವರ್‌ಗ್ರೀನ್ ಹೀರೋಯಿನ್ ಸುಧಾರಾಣಿ ಲೈಫಲ್ಲಿ ಹೊಸ ಟ್ವಿಸ್ಟ್, ಫ್ಯಾನ್ಸ್ ಗಾಬರಿಯಾಗ್ಬೇಡಿ!

ಸುಧಾರಾಣಿ (Sudharan) ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ಆನಂದ್ ಸಿನಿಮಾದ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಸುಧಾರಾಣಿ ಕನ್ನಡ ನಾಡಿನ ಮನೆ ಮಗಳಾದ್ರು. ಈಗ ಇವರ ಲೈಫಲ್ಲಿ ಹೊಸಾ ಬದಲಾವಣೆಯಾಗಿದೆ. 

Share this Video
  • FB
  • Linkdin
  • Whatsapp

ಸುಧಾರಾಣಿ (Sudharan) ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ಆನಂದ್ ಸಿನಿಮಾದ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಸುಧಾರಾಣಿ ಕನ್ನಡ ನಾಡಿನ ಮನೆ ಮಗಳಾದ್ರು. ಈಗ ಇವರ ಲೈಫಲ್ಲಿ ಹೊಸಾ ಬದಲಾವಣೆಯಾಗಿದೆ.ಶಿವರಾಜ್ ಕುಮಾರ್ ಜೊತೆ ಟುವ್ವಿ ಟುವ್ವಿ ಎಂದು ಕುಣಿದಿದ್ದ ಸುಂದರಿ. ಕನ್ನಡಿಗರ ಮನ ಮೆಚ್ಚಿನ ಹುಡುಗಿ, ರಣರಂಗದ ಶಿವರಾಜ್ಕುಮಾರ್ಗೆ ಇವ ಯಾವ ಸೀಮೆ ಗಂಡು ಕಾಣಮ್ಮೋ ಎಂದ ಸುಧಾರಾಣಿ, ಹ್ಯಾಟ್ರಿಕ್ ಸಕ್ಸಸ್ ಪಡೆದ ನಾಯಕಿ .

Add Asianetnews Kannada as a Preferred SourcegooglePreferred

ಶ್ರದ್ಧಾ ಕ್ಯಾಟ್‌ವಾಕ್, ನೇಹಾ ವಿತ್ ಫ್ಯಾಮಿಲಿ; ನಟಿಯರ ಏರ್‌ಪೋರ್ಟ್ ಲುಕ್ ವೈರಲ್!

ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ ತುಳು ಭಾಷೆ ಸೇರಿದಂತೆ ಒಟ್ಟು 130ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗಲೂ ಕನ್ನಡ ಬೆಳ್ಳಿತೆರೆಯಲ್ಲಿ ಹೈಯೆಸ್ಟ್ ಪೈಯಿಡ್ ಪೋಷಕ ನಟಿ ಆಗಿರೋ ಇವ್ರು ಈಗ ಕಿರುತೆರೆಗೆ ಶ್ರೀರಸ್ತು ಶುಭಮಸ್ತು ಎಂದು ಬಲಗಾಲಿಟ್ಟಿದ್ದಾರೆ. 

ಒಂದೇ ಹುಡುಗಿನ ಲವ್ ಮಾಡಿದ ಇಬ್ಬರು ಸೂಪರ್ ಸ್ಟಾರ್‌ಗಳ ಲವ್ ಸೀಕ್ರೆಟ್ ಔಟ್

ಸುಧಾರಾಣಿ ಈ ಹಿಂದೆ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಗೆಸ್ಟ್ ರೋಲ್ ಮಾಡಿದ್ರು. ಈಗ ದೀಪಕ್ ಗೌಡ ನಾಯಕನಾಗಿರೋ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ದೀಪಕ್ ಗೌಡ ತಾಯಿ ಪಾತ್ರ ಮಾಡುತ್ತಿದ್ದು, ಕಿರುತೆರೆಗೆ ಪೂರ್ಣ ಪ್ರಮಾಣದಲ್ಲಿ ಎಂಟ್ರಿ ಕೊಟ್ಟಿದ್ದು, ಕಿರುತೆರೆಗೆ ಬಂದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸುಧಾರಾಣಿ ಮನ ಬಿಚ್ಚಿ ಮಾತನಾಡಿದ್ದಾರೆ. 

Related Video