ಶುರುವಾಗಲಿದೆ ಬಿಗ್ ಬಾಸ್ ಸೀಸನ್ 9, ಯಾರ್ಯಾರಿರಲಿದ್ದಾರೆ ಮನೆಯಲ್ಲಿ..?

ಸದ್ಯ ಊರೆಲ್ಲೆಲ್ಲಾ ಚಾಲ್ತಿಯಲ್ಲಿರೋದು ಒಂದೇ ಹೆಸರು ಅದು ಕಿಚ್ಚ ಸುದೀಪ್, ಒಂದ್ ಕಡೆ ವಿಕ್ರಾಂತ್ ರೋಣನಾಗಿ ಕಿಚ್ಚ ಅಬ್ಬರಿಸಲು ಸಜ್ಜಾಗಿದ್ರೆ, ಇನ್ನೊಂದ್ ಕಡೆ ಸ್ಮಾನ್ ಸ್ಕ್ರೀನ್ ಮೂಲಕ ಬಿಗ್ ಬಾಸ್ ವೇದಿಕೆಗೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. 

Share this Video
  • FB
  • Linkdin
  • Whatsapp

ಸದ್ಯ ಊರೆಲ್ಲೆಲ್ಲಾ ಚಾಲ್ತಿಯಲ್ಲಿರೋದು ಒಂದೇ ಹೆಸರು ಅದು ಕಿಚ್ಚ ಸುದೀಪ್, ಒಂದ್ ಕಡೆ ವಿಕ್ರಾಂತ್ ರೋಣನಾಗಿ ಕಿಚ್ಚ ಅಬ್ಬರಿಸಲು ಸಜ್ಜಾಗಿದ್ರೆ, ಇನ್ನೊಂದ್ ಕಡೆ ಸ್ಮಾನ್ ಸ್ಕ್ರೀನ್ ಮೂಲಕ ಬಿಗ್ ಬಾಸ್ (BiggBoss) ವೇದಿಕೆಗೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಕ್ಕಿ ಮ್ಯಾನ್ ಆಗಿ ಅಪ್ಪು ಡ್ಯಾನ್ಸ್ ನೋಡಿದ್ರಾ? ಸಿನಿಮಾ ಹಂಗಾಮದಲ್ಲಿ ಎಕ್ಸ್‌ಕ್ಲೂಸಿವ್

ಬಿಗ್ ಬಾಸ್ ಮನೆ ಸಿದ್ದವಾಗಿದೆ. ಈ ಭಾರಿಯೂ ಬೆಂಗಳೂರಿನಲ್ಲೇ ಬಿಗ್ ಬಾಸ್ ಮನೆ ನಿರ್ಮಾಣವಾಗಿದ್ದು ಕಿಚ್ಚ ಮತ್ತೆ ಕ್ಲಾಸ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಎಂಟ್ರಿಕೊಟ್ಟು ಅಭಿಮಾನಿಗಳ ಮನಸ್ಸಿಗೆ ಕಿಚ್ಚು ಹಚ್ಚಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಸೀಸನ್ 9 ರ ಪ್ರೋಮೋ ಶೂಟ್ ಆಗಿದೆ...

ಬಿಗ್ ಬಾಸ್ ಸೀಸನ್ 9 ಆಗಸ್ಟ್ ನಲ್ಲಿ ಶುರುವಾಗಲಿದೆ..ಇನ್ನು ಈ ಭಾರಿ ಬಿಗ್ ಬಾಸ್ ನಲ್ಲಿ ಭಾರಿ ಬದಲಾವಣೆ ಆಗಿದ್ದು ಓಟಿಟಿಯಲ್ಲಿ 44 ದಿನ ಮಿನಿ ಬಿಗ್ ಬಾಸ್ ಪ್ರಸಾರವಾದ್ರೆ ಟಿವಿಯಲ್ಲಿ 99 ದಿನಗಳು ಪ್ರಸಾರವಾಗಲಿದೆ. ಎರಡು ಬಿಗ್ ಬಾಸ್ ನಲ್ಲಿ ಬೇರೆ ಬೇರೆ ಸ್ಪರ್ಧಿಗಳು ಇರಲಿದ್ದಾರೆ. ಎರಡು ಶೋ ಗೂ ಕಿಚ್ಚನದ್ದೆ ನಿರೂಪಣೆ. 

ಹೊಸ ಕಂಟೆಂಟ್ ಹೊಸ ಕಾನ್ಸೆಪ್ಟ್‌ನ 'ಕರ್ಮಣ್ಯೆ ವಾದಿಕಾರಸ್ತೆ' ತೆರೆಗೆ

ಬಿಗ್ ಬಾಸ್ ನಲ್ಲಿ ಸ್ಟಾರ್ ಗಳ ಜೊತೆಯಲ್ಲಿ ಕಾಮನ್ ಮ್ಯಾನ್ ಕೂಡ ಎಂಟ್ರಿಕೊಡ್ತಾರೆ. ಸದ್ಯದ ಮಾಹಿತಿ ಪ್ರಕಾರ ಕಾಫಿ ನಾಡು ಚಂದು, ಸೋನು ಶ್ರೀನಿವಾಸ್ ಗೌಡ, ಕನ್ನಡತಿ ಅಕ್ಕ ಅನು, ರಾಧಿಕಾ ಕುಮಾರಸ್ವಾಮಿ , ಡ್ರೋನ್ ಪ್ರತಾಪ್ , ಚಕ್ರವರ್ತಿ ಸೂಲಿಬೆಲೆ, ಮಂಜುಳಾ ಪೂಜಾರ, ನಲಪಾಡ್ ಮೊಹಮ್ಮದ್ ರಾಜಕಾರಣಿ, ಚಿಕ್ಕಣ್ಣ , ಆರ್ಯವರ್ಧನ್ ಗುರೂಜಿ ಇರಲಿದ್ದಾರೆ. 

Related Video