ಲಕ್ಕಿ ಮ್ಯಾನ್ ಆಗಿ ಅಪ್ಪು ಡ್ಯಾನ್ಸ್ ನೋಡಿದ್ರಾ ? ಸಿನಿಮಾ ಹಂಗಾಮದಲ್ಲಿ ಎಕ್ಸ್‌ಕ್ಲೂಸಿವ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಲಕ್ಕಿ ಮ್ಯಾನ್ ಸಿನಿಮಾ ರಿಲೀಸ್ ಗಾಗಿ ಕಾದಿದ್ದಾರೆ. ಮದರಂಗಿ ಕೃಷ್ಣ ಗೆಸ್ಟ್ ಅಪೀರಿಯನ್ಸ್ ಮಾಡಿದ್ದು ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೇ ಖ್ಯಾತಿಯಾಗಿರೋ ಪ್ರಭುದೇವಾ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಫ್ಯಾನ್ಸ್ ಕಾತುರರಾಗಿದ್ದಾರೆ. 
 
Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಲಕ್ಕಿ ಮ್ಯಾನ್ ಸಿನಿಮಾ ರಿಲೀಸ್ ಗಾಗಿ ಕಾದಿದ್ದಾರೆ. ಮದರಂಗಿ ಕೃಷ್ಣ ಗೆಸ್ಟ್ ಅಪೀರಿಯನ್ಸ್ ಮಾಡಿದ್ದು ಇಂಡಿಯನ್ ಮೈಕಲ್ ಜಾಕ್ಸನ್ ಅಂತಾನೇ ಖ್ಯಾತಿಯಾಗಿರೋ ಪ್ರಭುದೇವಾ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಫ್ಯಾನ್ಸ್ ಕಾತುರರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪ್ಪು ಅಭಿಮಾನಿಗಳಿಗೆ ಪ್ರಭುದೇವಾ ಡ್ಯಾನ್ಸ್ ಕೋರಿಯೋಗ್ರಾಫಿಯಲ್ಲಿ ಅಪ್ಪು ಡ್ಯಾನ್ಸ್ ಮಾಡಬೇಕು ಅನ್ನೋ ಆಸೆ ಇತ್ತು.. ಆದ್ರೆ ಆ ಆಸೆ ನೆರವೇರಲಿಲ್ಲವಾದರೂ ಪ್ರಭುದೇವಾ ಹಾಗೂ ಅಪ್ಪು ಇಬ್ಬರು ಒಟ್ಟಿಗೆ ಹಾಡೋಂದಕ್ಕೆ ಡ್ಯಾನ್ಸ್ ಮಾಡಿರೋದು ಸಖತ್ ಥ್ರಿಲ್ ಕೊಟ್ಟಿದೆ. ಸದ್ಯ ಫ್ಯಾನ್ಸ್ ನಿರೀಕ್ಷೆಯೊಂದೆ ಸಿನಿಮಾ ಯಾವಾಗ ರಿಲೀಸ್ ಆಗಿತ್ತೇ ಅನ್ನೋದು...

ಈ ಚಿತ್ರವನ್ನು ಪ್ರಭುದೇವಾ ಸಹೋದರ ನಾಗೇಂದ್ರಪ್ರಸಾದ್ ಅವರು ನಿರ್ದೇಶಿಸಿದ್ದಾರೆ. ಲಕ್ಕಿಮ್ಯಾನ್ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ. ತಮಿಳಿನ ಓ ಮೈ ಕಡವುಲೆ ಚಿತ್ರದ ಎಳೆಯನ್ನಿಟ್ಟುಕೊಂಡು ನಿರ್ದೇಶಕ ನಾಗೇಂದ್ರಪ್ರಸಾದ್ ಅವರು ಒಂದು ಅದ್ಭುತವಾದ ಫ್ಯಾಂಟಸಿ ಡ್ರಾಮಾ ಕಥಾಹಂದರವನ್ನು ಲಕ್ಕಿ ಮ್ಯಾನ್ ಚಿತ್ರದಲ್ಲಿ ನಿರೂಪಿಸಿದ್ದಾರೆ.

Related Video