'ಜೊತೆ ಜೊತೆಯಲಿ' ಮೇಘಾ ಶೆಟ್ಟಿ ವರ್ಕೌಟ್ ವಿಡಿಯೋ ವೈರಲ್; ಇದಕ್ಕೂ ಅಭಿಮಾನಿ ಬಳಗವೇ ಇದೆ

ಬಳುಕುವ ಬಾಲೆಯರ  ಜಿಮ್ ವರ್ಕೌಟು. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು. ಚೆಲುವೆಯ ಕಸರತ್ತು ನೋಡೋದಕ್ಕೆ ಎರಡು ಕಣ್ಣು ಸಾಲದು..!
 

First Published Dec 19, 2024, 4:14 PM IST | Last Updated Dec 19, 2024, 4:14 PM IST

ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಎಂಟ್ರಿ ಕೊಟ್ಟ ಕ್ಯೂಟ್ ಚೆಲುವೆ ಮೇಘಾ ಶೆಟ್ಟಿ ಈಗ ಸಾಲು ಸಾಲು ಸಿನಿಮಾ ಮಾಡ್ತಾ ಇದ್ದಾಳೆ. ಈ ಹಾಲು ಬಣ್ಣದ, ಜೇನ ಕಣ್ಣಿನ ಚೆಲುವೆ ಸೋಷಿಯಲ್ ಮಿಡಿಯಾದಲ್ಲೂ ಸಖತ್ ಆಕ್ಟಿವ್. ಅದ್ರಲ್ಲೂ ಮೇಘಾ ಶೆಟ್ಟಿ ತನ್ನ ಜಿಮ್ ವರ್ಕೌಟ್ ವಿಡಿಯೋಸ್ ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡ್ತಾ ಇರ್ತಾಳೆ. ಬ್ಯಾಕ್ ಪ್ಲಿಪ್, ಫ್ರಂಟ್ ಪ್ಲಿಪ್ ಸೇರಿದಂತೆ ಹಲವು ಸಾಹಸಗಳನ್ನ ಈ ಚೆಲುವೆ ಲೀಲಾಜಾಲವಾಗಿ ಮಾಡ್ತಾಳೆ. ಈಕೆಯ ವರ್ಕೌಟ್ ವಿಡಿಯೋಸ್​​​ಗಂತ್ಲೇ ಒಂದು ಸಪರೇಟ್  ಅಭಿಮಾನಿ ಬಳಗವೇ ಇದೆ. ಈಕೆ ಬಿಗಿ ಬಿಗಿ ಉಡುಗೆ ತೊಟ್ಟು ವರ್ಕೌಟ್ ಮಾಡ್ತಾ ಇದ್ರೆ ಸೋಷಿಯಲ್ ಮಿಡಿಯಾ ನಿಗಿ ನಿಗಿ ಕೆಂಡವಾಗಿರುತ್ತೆ. 

ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ ಅರ್ಯನ್; ಮಾಲಾಶ್ರೀ ಮಗ ಹೇಗಿದ್ದಾನೆ ನೋಡಿ
 

Video Top Stories