ಈ ಬಾರಿಯ ಬಿಗ್ ಬಾಸ್​ ಸ್ಪರ್ಧಿಗಳೆಲ್ಲಾ ಸಪ್ಪೆ ಸಪ್ಪೆ: ಜಗದೀಶ್ ಇಲ್ಲದ ದೊಡ್ಮನೆಯಲ್ಲಿ ಕಳೆಯೇ ಇಲ್ಲ

ಲಾಯರ್ ಜಗದೀಶ್​ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಜನ. ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್​​ನ ಆಚೆ ಹಾಕಲಾಗಿದೆ.

First Published Oct 21, 2024, 12:39 PM IST | Last Updated Oct 21, 2024, 12:39 PM IST

ಈ ಸಾರಿ ಬಿಗ್ ಬಾಸ್​ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು ಒನ್ ಌಂಡ್ ಓನ್ಲಿ ಲಾಯರ್ ಜಗದೀಶ್. ಬೇರೆ ಸ್ಪರ್ಧಿಗಳಿಗೆ  ಮಾತ್ರ ಅಲ್ಲ ಖುದ್ದು ಬಿಗ್ ಬಾಸ್​​ಗೇನೇ ಕ್ವಾಟ್ಲೆ ಕೊಟ್ಟಿದ್ದು ಈ ಜಗದೀಶ್. ಆದ್ರೆ ಈಗ ದೊಡ್ಮನೆಯಿಂದ ಜಗದೀಶ್​ರನ್ನೇ ಹೊರಹಾಕಲಾಗಿದ್ದು ಬಿಗ್ ಬಾಸ್​​ಗಿದ್ದ ಆಕರ್ಷಣೆಯೇ ಕಮ್ಮಿಯಾಗಿದೆ. ಲಾಯರ್ ಜಗದೀಶ್​ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಜನ. ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್​​ನ ಆಚೆ ಹಾಕಲಾಗಿದೆ. ಮನೆಯ ಮೂಲಭೂತ ನಿಯಮ ಉಲ್ಲಂಘಿಸಿರೋದು, ಮತ್ತೊಂದು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ  ಲಾಯರ್ ಜಗದೀಶ್​​ನ ಮನೆಯಿಂದ ಹೊರಹೋಗುವಂತೆ ಬಿಗ್ ಬಾಸ್ ಆದೇಶ ಬಂತು. ಆ ಆದೇಶಕ್ಕೆ ತಲೆಬಾಗಿದ ಜಗದೀಶ್ ದೊಡ್ಮನೆಯ ಮುಖ್ಯಬಾಗಿಲಿನಿಂದ ಹೊರಬಂದಿದ್ದಾರೆ. 

ಅಸಲಿಗೆ ಲಾಯರ್ ಜಗದೀಶ್ ಮತ್ತು ರಂಜಿತ್ ನಡುವೆ ಗುರುವಾರ ಮಾರಾಮಾರಿ ನಡೆದಿತ್ತು. ರಂಜಿತ್ ದೈಹಿಕವಾಗಿ ಜಗದೀಶ್​ಗೆ ಘಾಸಿಯಾಗುವಂತೆ ತಳ್ಳಿದ್ರು. ಅಸಲಿಗೆ ಆವಾಗಲೇ ಇವರಿಬ್ಬರನ್ನೂ ಮನೆಯಿಂದ ಹೊರಹಾಕಬೇಕಿತ್ತು. ಆದ್ರೆ ವಾರಾಂತ್ಯದ ಕಿಚ್ಚನ ಪಂಚಾಯತಿಯಲ್ಲಿ ಈ ವಿಚಾರವನ್ನಿಟ್ಟು ಆ ಬಳಿಕ ಮುಂದಿನ ತೀರ್ಮಾನ ಮಾಡಬೇಕು ಅಂತ ಯೋಚಿಸಲಾಗಿತ್ತು. ಆದ್ರೆ ಅದಕ್ಕೆ ಅವಕಾಶವೇ ಕೊಡದಂತೆ ಮತ್ತೆ ಮನೆಯಲ್ಲಿ ಗಲಾಟೆ ಶುರುವಾಗಿತ್ತು. ಸೋ ಏಕಾಏಕಿ ಮಧ್ಯಪ್ರವೇಶಿಸಿದ ಬಿಗ್ ಬಾಸ್ ಈ ಇಬ್ಬರನ್ನೂ ಮನೆಯಿಂದ ಆಚೆ ಹಾಕಿದ್ದಾರೆ. ಹೌದು ಲಾಯರ್​ ಜಗದೀಶ್​ನ ಬಿಗ್ ಬಾಸ್ ಮನೆಯಿಂದ ಆಚೆಹಾಕಿದಾಗ ಮನೆಮಂದಿಯೆಲ್ಲಾ ಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದಾರೆ. ಸಂಭ್ರಮಾಚರಣೆ ಮಾಡಿದ್ದಾರೆ. ಆದ್ರೆ ಅದೇ ರಂಜಿತ್​ನ ಹೊರಹಾಕ್ತಾನೇ ಕಣ್ಣೀರು ಸುರಿಸಿ ಗೋಳಾಡಿದ್ದಾರೆ. 

ಅಲ್ಲಿಗೆ ಬಿಗ್ ಬಾಸ್​ನಲ್ಲಿರೋ ಇತರ ಸದಸ್ಯರೆಲ್ಲಾ ಒಂದು ಕಡೆ ಆದ್ರೆ ಲಾಯರ್​ ಜಗ್ಗಿನೇ ಮತ್ತೊಂದು ಕಡೆ. ಇಡೀ ಮನೆಯನ್ನೇ ಎದುರು ಹಾಕಿಕೊಂಡು ಸಿಂಗಲ್ ಸಿಂಹದಂತೆ ಹೈಲೈಟ್ ಆಗಿದ್ದ ಜಗದೀಶ್ ಆಚೆ ಹೋಗಿದ್ದು ಮನೆಮಂದಿಗೆಲ್ಲಾ ಖುಷಿ ಕೊಟ್ಟಿದೆ. ಹೌದು ಈ ಸಾರಿಯ ಬಿಗ್ ಬಾಸ್ ಸೀಸನ್​ನಲ್ಲಿ ಹೈಲೈಟ್ ಅಂತ ಇದ್ದಿದ್ದೇ ಜಗದೀಶ್. ಕಂಡಕಂಡವರ ಜೊತೆಗೆ ಕಾಲು ಕೆರೆದುಕೊಡು ಜಗಳ ಆಡ್ತಾ, ಲಾಯರ್ ಪಾಯಿಂಟ್​​ಗಳನ್ನ ಹಾಕ್ತಾ ಇದ್ದ ಜಗ್ಗಿ ಜನರಿಗೆ ಹೇರಳ ಮನರಂಜನೆ ಕೊಟ್ಟಿದ್ರು. ಬರೀ ಮನೆಮಂದಿಗೆ ಮಾತ್ರ ಅಲ್ಲ  , ಸಾಕ್ಷಾತ್ ಬಿಗ್ ಬಾಸ್​​ಗೇನೇ ಚಾಲೆಂಜ್ ಹಾಕಿದ್ರು ಲಾಯರ್ ಜಗದೀಶ್. 

ಕಿಚ್ಚನ ಪಂಚಾಯತಿಯಲ್ಲಿ ಸಾರಿ ಕೇಳಿದ್ರೂ ಮತ್ತೆ ಅದೇ ವರಸೆ ಮುಂದುವರಸಿದ್ದ ಲಾಯರ್​ ಜಗ್ಗಿಯನ್ನ ಕಂಡು ಈತ ಜಗತ್ ಕಿಲಾಡಿ ಅಂತ ಜನರೆಲ್ಲಾ ಬೆನ್ನು ತಟ್ಟಿದ್ರು. ನಿಜ ಹೇಳಬೇಕಂದ್ರೆ ಈ ಸಾರಿ ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧಿಗಳೆಲ್ಲಾ ಸಪ್ಪೆ ಸಪ್ಪೆ. ಕಾಮಿಡಿಯನ್​​ಗಳು ಕಾಮಿಡಿ ಮಾಡ್ತಿಲ್ಲ.. ಯಂಗ್ ಜೋಡಿಗಳು ಪ್ರೀತಿ ಮಾಡ್ತಿಲ್ಲ.. ಸೀರಿಯಲ್ ಸುಂದರಿಯರೂ ಬಾಯೇ ಬಿಡ್ತಿಲ್ಲ.. ಹೀಗಿರೋವಾಗ ಯಾರ್ ತಾನೇ ಈ ಶೋ ನೋಡ್ತಾರೆ ಅನ್ನೋ ವಾತಾವರಣ ನಿರ್ಮಾಣ ವಾಗಿತ್ತು. ಇಂಥಾ ಸಪ್ಪೆ ವಾತಾವರಣದಲ್ಲಿ ಮನೆಯಲ್ಲಿ ಸೌಂಡ್ ಕ್ರಿಯೇಟ್ ಮಾಡಿದ್ದೇ ಲಾಯರ್ ಜಗದೀಶ್.ಈಗ ಇಂಥಾ ಎಂಟರ್​ಟೈನರ್​​ನ ಮನೆಯಿಂದ ಆಚೆ ಹಾಕಿದ್ದು ನೋಡಿ, ಇನ್ನು ಮುಂದೆ ಬಿಗ್ ಬಾಸ್ ಕಥೆ ಮುಗಿದೋಯ್ತು ಬಿಡಿ ಅಂತಿದ್ದಾರೆ ಪ್ರೇಕ್ಷಕರು. 

Video Top Stories