ಟೋಕಿಯೋ 2020: ಒಲಿಂಪಿಕ್ಸ್‌ ಪದಕ ಬೇಟೆಗೆ ಸಾಯಿ ಪ್ರಣೀತ್ ರೆಡಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ನನ್ನ ದೊಡ್ಡ ಕನಸಾಗಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವ ಮೂಲಕ ಈ ಕನಸು ನನಸಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಪ್ರಣೀತ್ ತಿಳಿಸಿದ್ದಾರೆ.
 
Share this Video
  • FB
  • Linkdin
  • Whatsapp

ಟೋಕಿಯೋ(ಜು.22): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಬಿ. ಸಾಯಿ ಪ್ರಣೀತ್ ಏಷ್ಯಾನೆಟ್‌ ನ್ಯೂಸ್‌ ಜತೆ ಎಕ್ಸ್‌ಕ್ಲೂಸಿವ್ ಮಾತುಕತೆ ನಡೆಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು ನನ್ನ ದೊಡ್ಡ ಕನಸಾಗಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವ ಮೂಲಕ ಈ ಕನಸು ನನಸಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಪ್ರಣೀತ್ ತಿಳಿಸಿದ್ದಾರೆ.

ಅತಿದೊಡ್ಡ ಕ್ರೀಡಾಜಾತ್ರೆ ಟೋಕಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ

ಜಪಾನ್‌ನಲ್ಲಿ ಈಗಾಗಲೇ ಆಡಿದ ಅನುಭವವಿದ್ದು, ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ ಜರ್ನಿ ಕುರಿತಂತೆ ಏಷ್ಯಾನೆಟ್‌ ನ್ಯೂಸ್‌ ಜತೆಗೆ ಸಾಯಿ ಪ್ರಣೀತ್ ಸಂಪೂರ್ಣ ಮಾತುಕತೆ ಇಲ್ಲಿದೆ ನೋಡಿ

Related Video