ಟಕ್ ಟಕ್... ಹೊಸ ಫೀಚರ್ ಪರಿಚಯಿಸಿದೆ ಟಿಕ್ ಟಾಕ್!
ಫೇಸ್ಬುಕ್‌ನಿಂದ ಹೊಸ ‘ಹಣಕಾಸು’ ವ್ಯವಸ್ಥೆ | ಕೊನೆಗೂ ಮೊಬೈಲ್ ಪ್ರಿಯರ ಕೈ ಸೇರಿದ Samsung Galaxy M40 | ಟಿಕ್ ಟಾಕ್ ಹೊಸ ಫೀಚರ್ | Vivo Z1 Pro ಚಿತ್ರಗಳು ಲೀಕ್! |
ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳ ಅನುಮೋದನೆಯೊಂದಿಗೆ, ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಮುಖ್ಯವಾಹಿನಿಗೆ ತರಲು ಫೇಸ್ಬುಕ್ ಸಿದ್ಧತೆ ನಡೆಸಿದೆ. ಫೇಸ್ಬುಕ್ ಲಿಬ್ರಾ ಎಂಬ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದು, ವೀಸಾ, ಮಾಸ್ಟರ್ ಕಾರ್ಡ್, ಪೇಪಾಲ್ ಮತ್ತು ಉಬರ್‌ನಂತಹ ಹತ್ತಾರು ಕಂಪನಿಗಳು ಇದಕ್ಕೆ ಕೈಜೋಡಿಸಿವೆ.
ಇತ್ತೀಚೆಗೆ ಬಿಡುಗಡೆಯಾದ Samsung Galaxy M40 ಇಂದಿನಿಂದ ದೇಶಾದ್ಯಂತ ಮಾರಾಟಕ್ಕೆ ಲಭ್ಯವಾಗಿದೆ. Galaxy M ಶ್ರೇಣಿಯ ನಾಲ್ಕನೇ ಫೋನ್ ಇದಾಗಿದ್ದು, ವೀಶಿಷ್ಟ ಫೀಚರ್ ಗಳನ್ನು ಹೊಂದಿದೆ. ಹೋಲ್ ಪಂಚ್ ಸೆಲ್ಫೀ ಕ್ಯಾಮೆರಾ ಡಿಸೈನ್, Infinity-O ಡಿಸ್ಪ್ಲೇ ಪ್ಯಾನೆಲ್, ಟ್ರಿಪಲ್ ಕ್ಯಾಮೆರಾ ಸೆಟ್-ಅಪ್ ಮತ್ತು ಸ್ಕ್ರೀನ್ ಸೌಂಡ್ ತಂತ್ರಜ್ಞಾನ ಹೊಂದಿರುವ 6GB + 128GB ವೇರಿಯೆಂಟ್ ಫೋನ್ ಬೆಲೆ, 19,990 ರೂಪಾಯಿಯಾಗಿದೆ.
ಸಣ್ಣ ವಿಡಿಯೋಗಳಿಗೆ ಜನಪ್ರಿಯವಾಗಿರುವ ಟಿಕ್ ಟಾಕ್, ‘ಡಿವೈಸ್ ಮ್ಯಾನೇಜ್ಮೆಂಟ್’ ಎಂಬ ಹೊಸ ಫೀಚರನ್ನು ಪರಿಚಯಿಸಿದೆ. ಸುರಕ್ಷತೆ ದೃಷ್ಟಿಯಿಂದ ಬಳಕೆದಾರರು ಇತರ ಡಿವೈಸ್ ಗಳಲ್ಲಿರುವ ತಮ್ಮ ಸೆಶ್ಶನ್‌ಗಳನ್ನು ಈ ಫೀಚರ್ ಮೂಲಕ ಸ್ಥಗಿತಗೊಳಿಸಬಹುದು ಅಥವಾ ತೆಗೆದು ಹಾಕಬಹುದಾಗಿದೆ.
ಬಿಡುಗಡೆಗೆ ಮುನ್ನ Vivo Z1 Pro ಚಿತ್ರಗಳು ಲೀಕ್ ಆಗಿವೆ. Vivoನ ಈ ಹೊಸ ಫೋನ್, ಟ್ರಿಪಲ್ ಕ್ಯಾಮೆರಾ, ಹೋಲ್ ಪಂಚ್ ಡಿಸ್ಪ್ಲೇ ಪ್ಯಾನೆಲ್ ಹೊಂದಿದೆ. Snapdragon 712 ಚಿಪ್ ಸೆಟ್, 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್ ಫೀಚರ್ ಕೂಡಾ ಈ ಫೋನಿನಲ್ಲಿದೆ.
2019ರ ಅಪ್ಡೇಟ್ ಬಿಡುಗಡೆ ಮಾಡಿರುವ ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್, ಭಾರತದ 10 ಭಾಷೆಗಳಿಗೆ smart phonetic keyboards ಸೌಲಭ್ಯವನ್ನು ಕಲ್ಪಿಸಿದೆ. ಸೋ, ಇನ್ಮುಂದೆ ಕನ್ನಡ ಸೇರಿದಂತೆ ಹಿಂದಿ, ಬಂಗಾಳಿ, ತಮಿಳು, ಮರಾಠಿ, ಪಂಜಾಬಿ, ಗುಜರಾತಿ, ಒಡಿಯಾ, ತೆಲುಗು ಮತ್ತು ಮಳಯಾಲಂ ಭಾಷಿಕರಿಗೆ ಈ ಅಪ್ಡೇಟ್ ನಿಂದ ಅನುಕೂಲವಾಗಲಿದೆ.