Asianet Suvarna News Asianet Suvarna News

“ಇದು ಟ್ರೈಲರ್, ಪಿಕ್ಚರ್ ಅಭೀ ಬಾಕಿ ಹೈ..” ಅಂದ ಕೈ ಶಾಸಕ: ತೆರೆಯ ಹಿಂದೆ ಕಣ್ಣಾ ಮುಚ್ಚಾಲೆ ಆಟ.. ದಳಪತಿಗಳಿಗೆ ಪ್ರಾಣ ಸಂಕಟ..!

ಪ್ರಜ್ವಲ್ ರೇವಣ್ಣನ ಪೆನ್'ಡ್ರೈವ್ ವೈರಲ್ ಪ್ರಕರಣದಲ್ಲಿ ಅಸಲಿ ತಿಮಿಂಗಿಲ ಯಾರು..? ಇದು ರಾಜ್ಯ ರಾಜಕೀಯದಲ್ಲಿ ಸದ್ಯ ಬಿರುಗಾಳಿ ಎಬ್ಬಿಸಿರೋ ಪ್ರಶ್ನೆ. ಇಲ್ಲಿ ದಳಪತಿ ಟಾರ್ಗೆಟ್ ಡಿಕೆಶಿಯಾದ್ರೆ, ಡಿಕೆಶಿ ಟಾರ್ಗೆಟ್ ದಳಪತಿ. 

ಬೆಂಗಳೂರು(ಮೇ.15): ಕಿಡ್ನಾಪ್ ಕೇಸ್'ನಲ್ಲಿ ಅಂದರ್ ಆಗಿದ್ದ ಮಾಜಿ ಸಚಿವ ಎಚ್.ಡಿ ರೇವಣ್ಣ  ಬಾಹರ್..! 6 ದಿನಗಳ ನಂತರ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದ ಮಾಜಿ ಮಿನಿಸ್ಟರ್..! ಪೆನ್'ಡ್ರೈವ್ ಪ್ರಕರಣಕ್ಕೆ ದಿನಕೊಂದು ಟ್ವಿಸ್ಟ್..! “ಇದು ಟ್ರೈಲರ್, ಪಿಕ್ಚರ್ ಅಭೀ ಬಾಕಿ ಹೈ..” ಅಂದ ಕಾಂಗ್ರೆಸ್ ಶಾಸಕ..! “ದೊಡ್ಡ ತಿಮಿಂಗಿಲ ಸರ್ಕಾರದಲ್ಲೇ ಇದೆ” ಅಂದ ದಳಪತಿ ಕುಮಾರಸ್ವಾಮಿ..! “ತಿಮಿಂಗಿಲವನ್ನು ಅವರೇ ನುಂಗಲಿ” ಅಂದ ಡಿಸಿಎಂ ಡಿಕೆಶಿ..! ಏನಿದರ ಮರ್ಮ..? ಏನಿದರ ಗುಟ್ಟು..? ಇದೇ ಈ ಹೊತ್ತಿನ ವಿಶೇಷ, ಯಾರು ತಿಮಿಂಗಿಲ..?

ಯಾರು ತಿಮಿಂಗಿಲ.. ಪ್ರಜ್ವಲ್ ರೇವಣ್ಣನ ಪೆನ್'ಡ್ರೈವ್ ವೈರಲ್ ಪ್ರಕರಣದಲ್ಲಿ ಅಸಲಿ ತಿಮಿಂಗಿಲ ಯಾರು..? ಇದು ರಾಜ್ಯ ರಾಜಕೀಯದಲ್ಲಿ ಸದ್ಯ ಬಿರುಗಾಳಿ ಎಬ್ಬಿಸಿರೋ ಪ್ರಶ್ನೆ. ಇಲ್ಲಿ ದಳಪತಿ ಟಾರ್ಗೆಟ್ ಡಿಕೆಶಿಯಾದ್ರೆ, ಡಿಕೆಶಿ ಟಾರ್ಗೆಟ್ ದಳಪತಿ.  ಈ ಮಧ್ಯೆ ಪ್ರಕರಣದಲ್ಲಿ ಎದ್ದು ಬಂದಿದೆ ಹಾಸನದ ಮಾಜಿ ಬಿಜೆಪಿ ಶಾಸಕನ ಹೆಸರು. ಇದ್ರ ಅಸಲಿ ಸೂತ್ರಧಾರ ಅವ್ರೇ ಅಂತ ಆರೋಪ ಮಾಡಿದ್ದಾರೆ ಮಂಡ್ಯದ ಕಾಂಗ್ರೆಸ್ ಶಾಸಕ. ಹಾಗಾದ್ರೆ ಪೆನ್'ಡ್ರೈವ್ ವೈರಲ್ ಕೇಸ್'ನಲ್ಲಿ ನಿಜವಾದ ತಿಮಿಂಗಿಲ ಯಾರು..? 

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್! “ಸನ್ ಆಫ್ ರೇವಣ್ಣ”ಗೆ ಕಾದಿದ್ಯಾ ಭಾರೀ ಸಂಕಷ್ಟ..?

ಪ್ರಜ್ವಲ್ ಪೆನ್'ಡ್ರೈವ್ ವೀಡಿಯೊ ವೈರಲ್ ಮಾಡಿದ ತಿಮಿಂಗಿಲ ಯಾರು ಅನ್ನೋದೇ ಈಗ ಯಕ್ಷ ಪ್ರಶ್ನೆ. ತಮ್ಮ ವಿರುದ್ಧ ಆರೋಪ ಕೇಳಿ ಬರ್ತಾ ಇದ್ದಂತೆ ಎಲ್ಲವನ್ನೂ ದೇವರು ನೋಡ್ಕೋತಾನೆ ಅಂದಿದ್ದಾರೆ ಡಿಸಿಎಂ ಡಿಕೆಶಿ. ರೇವಣ್ಣ ರಿಲೀಸ್ ಆದ ದಿನವೇ ಡಿಕೆ ಶಿವಕುಮಾರ್ ಈ ಮಾತು ಹೇಳಿದ್ದೇಕೆ..? ಡಿಕೆ ಸಾಹೇಬನ ಮಾತಿನ ಮರ್ಮ ಏನು..?.

ಪ್ರಜ್ವಲ್ ರೇವಣ್ಣನ ಪೆನ್'ಡ್ರೈವ್ ಪ್ರಕರಣದಲ್ಲಿ ಯಾರು ತಿಮಿಂಗಿಲ ಅನ್ನೋ ಪ್ರಶ್ನೆ ಎದ್ದು ನಿಂತಿದೆ. ಅಶ್ಲೀಲ ವೀಡಿಯೊಗಳನ್ನು ವೈರಲ್ ಮಾಡಿದ್ದು ಯಾರು..? ಇದೇ ಈಗ ಕುತೂಹಲ ಕೆರಳಿಸಿರೋ ಮಿಲಿಯನ್ ಡಾಲರ್ ಪ್ರಶ್ನೆ. ಡಿಸಿಎಂ ಡಿಕೆ ಶಿವಕುಮಾರ್ ಅವ್ರೇ ದೊಡ್ಡ ತಿಮಿಂಗಿಲ ಅಂತ ಕುಮಾರಸ್ವಾಮಿ ಹೇಳಿದ್ರೆ, ಎಲ್ಲವನ್ನೂ ಆ ದೇವರು ನೋಡ್ಕೋತಾನೆ ಅಂದಿದ್ದಾರೆ ಡಿಕೆಶಿ. ಎಚ್.ಡಿ ರೇವಣ್ಣ ರಿಲೀಸ್ ಆದ ದಿನವೇ ಡಿಕೆ ಶಿವಕುಮಾರ್ ಈ ಮಾತು ಹೇಳಿದ್ದೇಕೆ..? ಡಿಕೆ ಸಾಹೇಬನ ಮಾತಿನ ಮರ್ಮ ಏನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಪ್ರಜ್ವಲ್ ರೇವಣ್ಣನ ಪೆನ್'ಡ್ರೈವ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಎಬ್ಬಿಸಿ ಬಿಟ್ಟಿದೆ. ವೀಡಿಯೊ ವೈರಲ್ ಹಿಂದಿರುವ ತಿಮಿಂಗಿಲ ಯಾರು ಅನ್ನೋ ವಿಚಾರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮಧ್ಯೆ ಭಾರೀ ಜಟಾಪಟಿಗೆ ಕಾರಣವಾಗಿದೆ. 

Video Top Stories