Asianet Suvarna News Asianet Suvarna News

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್! “ಸನ್ ಆಫ್ ರೇವಣ್ಣ”ಗೆ ಕಾದಿದ್ಯಾ ಭಾರೀ ಸಂಕಷ್ಟ..?

ಇತ್ತ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಾ ಇದ್ರೆ, ಅತ್ತ ಇಡೀ ಪ್ರಕರಣದ ಕೇಂದ್ರ ಬಿಂದು ಪ್ರಜ್ವಲ್ ರೇವಣ್ಣನ ಪತ್ತೆಯೇ ಇಲ್ಲ. ಪ್ರಜ್ವಲ್ ಸಿಗದೇ ಇದ್ರೂ ಆತನ ಕೊರಳಿಗೆ ಸುತ್ತಿಕೊಂಡಿರೋ ಕಾನೂನಿನ ಉರುಳು ಮಾತ್ರ ದಿನದಿಂದ ದಿನಕ್ಕೆ ಬಿಗಿಯಾಗ್ತಾನೇ ಇದೆ. 
 

ಬೆಂಗಳೂರು(ಮೇ.14):  ಸಂಸದ ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಅಪ್ಪನಿಗೆ ಜಾಮೀನು.. ಮಗನ ಕೊರಳಿಗೆ ಕಾನೂನಿನ ಉರುಳು..? ಬಿಜೆಪಿ ಮಾಜಿ ಶಾಸಕ ಪ್ರೀತಮ್ ಗೌಡ ಆಪ್ತರು ಅರೆಸ್ಟ್ ಆಗಿದ್ದೇಕೆ..? ವಿಡಿಯೋ ವೈರಲ್ ಆರೋಪ ಜೆಡಿಎಸ್ ಶಾಸಕನ ಮೇಲೆ ತಿರುಗಿದ್ದೇಕೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಅಪ್ಪ ಬಾಹರ್, ಮಗ ಅಂದರ್..? 

ಇತ್ತ ಪೆನ್‌ಡ್ರೈವ್ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಾ ಇದ್ರೆ, ಅತ್ತ ಇಡೀ ಪ್ರಕರಣದ ಕೇಂದ್ರ ಬಿಂದು ಪ್ರಜ್ವಲ್ ರೇವಣ್ಣನ ಪತ್ತೆಯೇ ಇಲ್ಲ. ಪ್ರಜ್ವಲ್ ಸಿಗದೇ ಇದ್ರೂ ಆತನ ಕೊರಳಿಗೆ ಸುತ್ತಿಕೊಂಡಿರೋ ಕಾನೂನಿನ ಉರುಳು ಮಾತ್ರ ದಿನದಿಂದ ದಿನಕ್ಕೆ ಬಿಗಿಯಾಗ್ತಾನೇ ಇದೆ. 

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌: ಹೊಳೆನರಸೀಪುರ, ಹಾಸನದಲ್ಲಿ ಎಫ್‌ಎಸ್‌ಎಲ್‌ ಪರಿಶೀಲನೆ

ಇತ್ತ ಅಪ್ಪ ಎಚ್.ಡಿ ರೇವಣ್ಣಗೆ ಜಾಮೀನು ಸಿಕ್ಕಿದ್ರೆ, ಅತ್ತ ಸತತ 17ನೇ ದಿನವೂ ಮರಿ ರೇವಣ್ಣನ ಪತ್ತೆಯೇ ಇಲ್ಲ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ಬೇಟೆಗೆ ಬಲೆ ಬೀಸಿರೋ ಎಸ್ಐಟಿ, ಇಲ್ಲಿ ಕಾನೂನಿನ ಉರುಳನ್ನು ಬಿಗಿಗೊಳಿಸ್ತಾ ಇದೆ. ಅತ್ಯಾಚಾರ ಪ್ರಕರಣಗಳಲ್ಲಿ ಪ್ರಜ್ವಲ್ ವಿರುದ್ಧ ಒಂದೊಂದೇ ಸಾಕ್ಷಿಗಳನ್ನು ಕಲೆ ಹಾಕ್ತಾ ಇದೆ. 

ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು ಸೋಮವಾರಕ್ಕೆ ಭರ್ತಿ 17 ದಿನ. ಅತ್ಯಾಚಾರ ಪ್ರಕರಣ ದಾಖಲಾಗುವ ಸುಳಿವು ಸಿಗುತ್ತಲೇ, ಚುನಾವಣೆ ಮುಗಿಯುತ್ತಿದ್ದಂತೆ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಈ ಕ್ಷಣದವರೆಗೆ ಪ್ರಜ್ವಲ್ ಬಗ್ಗೆ ಎಸ್ಐಟಿಗೆ ಸುಳಿವು ಸಿಕ್ಕಿಲ್ಲ. ತಲೆತಪ್ಪಿಸಕೊಂಡಿರೋ ಜೆಡಿಎಸ್ ಸಂಸದ ವಾಪಸ್ ಬರೋದನ್ನೇ ಎಸ್ಐಟಿ ಅಧಿಕಾರಿಗಳು ಕಾಯ್ತಾ ಇದ್ದಾರೆ.ಅಪ್ಪ ಬಾಹರ್ ಆದ್ರೂ ಮಗ ಅಂದರ್ ಆಗೋದು ಪಕ್ಕಾ ಅಂತ ಹೇಳಲಾಗ್ತಿದೆ. ಕಾರಣ ಪ್ರಜ್ವರ್ ರೇವಣ್ಣ ವಿರುದ್ಧ ದಾಖಲಾಗಿರೋದು ಸಾಮಾನ್ಯ ಕೇಸ್‌ಗಳಲ್ಲ, ಅತ್ಯಾಚಾರ ಪ್ರಕರಣಗಳು. ಹೀಗಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ತೀಕಾ ಕಡಿಮೆ ಎನ್ನಲಾಗ್ತಿದೆ. 

Video Top Stories