Asianet Suvarna News Asianet Suvarna News

ತಾಲಿಬಾನ್ ಕೈಯಲ್ಲಿ ಅಫ್ಘಾನಿಸ್ತಾನ, ಅಮೆರಿಕಾ ನಿರ್ಧಾರ ನಿರೀಕ್ಷಿತ: ಅನಂತ್ ನಾಗ್

ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬೆನ್ನಲ್ಲೇ ರಾಜಧಾನಿ ಕಾಬೂಲ್‌ನಲ್ಲಿ ಭಾರೀ ಅರಾಜಕತೆ ಉಂಟಾಗಿದೆ. ಕಂಡು ಕೇಳರಿಯದ ನಾಗರೀಕ ವಿಪತ್ತೊಂದಕ್ಕೆ ಸಾಕ್ಷಿಯಾಗುತ್ತಿದೆ. 

ಬೆಂಗಳೂರು (ಆ. 17): ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬೆನ್ನಲ್ಲೇ ರಾಜಧಾನಿ ಕಾಬೂಲ್‌ನಲ್ಲಿ ಭಾರೀ ಅರಾಜಕತೆ ಉಂಟಾಗಿದೆ. ಕಂಡು ಕೇಳರಿಯದ ನಾಗರೀಕ ವಿಪತ್ತೊಂದಕ್ಕೆ ಸಾಕ್ಷಿಯಾಗುತ್ತಿದೆ. 20 ವರ್ಷಗಳ ಕಾಲ ಉಗ್ರರನ್ನು ಮಟ್ಟ ಹಾಕಲು ಅಫ್ಘಾನಿಸ್ತಾನದಲ್ಲಿ ನಿರಂತರ ಯುದ್ಧ ನಡೆಸಿದ ಅಮೆರಿಕಾ ಕೊನೆಗೆ ನಡು ನೀರಿನಲ್ಲಿ ಅಫ್ಘನ್ನರನ್ನು ಕೈ ಬಿಟ್ಟು ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಜಾಗತಿಕ ವಿದ್ಯಮಾನದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಬೇಟ್ ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತ್ ನಾಗ್ ಮಾತನಾಡಿದ್ದಾರೆ. 

ತಾಲಿಬಾನ್ ತೆಕ್ಕೆಯಲ್ಲಿ ಅಫ್ಘಾನ್: ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ತಾ ಇದೆಯಾ ಅಮೆರಿಕಾ?

'ಬೈಡೆನ್ ನಿರ್ಧಾರ ಅವರ ಪ್ರಕಾರ ಸರಿ ಇದೆ. 20 ವರ್ಷಗಳ ಕಾಲ ಅಮೆರಿಕನ್ನರು ಅಫ್ಘಾನ್‌ಗೆ ಸಾಕಷ್ಟು ಸಹಾಯ ಮಾಡಿದೆ. ನಿಮ್ಮ ಸೈನಿಕರನ್ನು ಕಳುಹಿಸಿ ಎಂದು ಅಮೆರಿಕಾ, ಭಾರತದ ಮೇಲೆಯೂ ಒತ್ತಡ ಹಾಕಿತ್ತು. ಆದರೆ ಮೋದಿಯವರು ಇಂತ ತಪ್ಪನ್ನು ಮಾಡಿಲ್ಲ. ಪ್ರಧಾನಿ ಮೋದಿಯವರು 7 ವರ್ಷಗಳಿಂದಲೂ ಭಯೋತ್ಪಾದನೆ ಮಟ್ಟ ಹಾಕಲು ಹೋರಾಡೋಣ ಅಂತ ಎಷ್ಟೇ ಹೇಳಿದರೂ ಯಾರೂ  ಕೈ ಜೋಡಿಸಲಿಲ್ಲ. ಅಫ್ಘಾನ್ ಸ್ಥಿತಿ ಬಗ್ಗೆ ಬೇಸರವಿದೆ' ಎಂದು ಅನಂತ್ ನಾಗ್ ಹೇಳಿದ್ಧಾರೆ.  

Video Top Stories