ಬೈಕ್ ರೇಸ್‌ ವೇಳೆ ದುರ್ಘಟನೆ: ಯುವ ರೇಸರ್‌ ಶ್ರೇಯಸ್‌ ಹರೀಶ್‌ ಸಾವು

ಬೆಂಗಳೂರು ಮೂಲದ ದೇಶದ ಅತೀ ಚಿಕ್ಕ ಯುವ ರೇಸರ್‌ ಶ್ರೇಯಸ್‌ ಹರೀಶ್‌ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
 

Share this Video
  • FB
  • Linkdin
  • Whatsapp

ಎಂಎಂಎಸ್‌ಸಿ ಆಶ್ರಯದಲ್ಲಿ ಮದ್ರಾಸ್‌ನ ಅಂತಾರಾಷ್ಟ್ರೀಯ ರೇಸ್‌ ಸರ್ಕಿಟ್‌ನಲ್ಲಿ ನಡೆದ ರೇಸ್‌ನಲ್ಲಿ(Race) ದೇಶದ ಅತೀ ಚಿಕ್ಕ ಯುವ ರೇಸರ್‌ ಶ್ರೇಯಸ್‌ ಹರೀಶ್‌ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಮೋಟಾರ್‌ಸೈಕಲ್‌ ರೇಸಿಂಗ್‌ ಚಾಂಪಿಯನ್‌ಷಿಪ್‌ ಸಲುವಾಗಿ ನಡೆದ ರೇಸ್‌ನಲ್ಲಿ ಶ್ರೇಯಸ್‌ ಹರೀಶ್‌(Shreyas Harish) ಭಾಗಿಯಾಗಿದ್ದರು. ಮಲೇಷ್ಯಾದಲ್ಲಿ ಇದೇ ವರ್ಷ ನಡೆಯಬೇಕಿರುವ ಸೂಪರ್‌ ಬೈಕ್‌(Bike) ಚಾಂಪಿಯನ್‌ಷಿಪ್‌ಗೆ ಅರ್ಹತೆಯನ್ನು ಪಡೆದಿದ್ದರು. ಬೆಂಗಳೂರಿನ 13 ವರ್ಷದ ಬೈಕ್ ರೇಸರ್‌ ಶ್ರೇಯಸ್‌ಗೆ ಅಪಘಾತದಲ್ಲಿ(Accident) ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದ್ದರೂ, ಅಷ್ಟರಲ್ಲೇ ಮೃತಪಟ್ಟಿದ್ದಾರೆ. ಈ ರೇಸ್‌ ನಡೆಯುವ ವೇಳೆ ಶ್ರೇಯಸ್‌ ತಂದೆ ಸಹ ಅಲ್ಲೇ ಇದ್ದರೂ ಎಂದು ತಿಳಿದುಬಂದಿದೆ. 

Related Video