ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!

ಜೈಲಿಗೆ ಹೋದವನು, ಭಯಾನಕ ‘ಉಗ್ರ’ನಾಗಿ ಹೊರ ಬರ್ತಾನೆ 
ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ಯಾರು ಗೊತ್ತಾ..? 
ಅಪರಾಧಿಗಳನ್ನು ತಿದ್ದುವ ಜೈಲು ‘ಉಗ್ರ’ವಾದಕ್ಕೆ ಬಡ್ತಿ ಕೊಡುತ್ತಿದೆ

Share this Video
  • FB
  • Linkdin
  • Whatsapp

ಶಿಕ್ಷೆ ಕೊಡಬೇಕಾದ ಜಾಗ ಉಗ್ರವಾದವನ್ನು ಬೋಧಿಸುತ್ತಿದೆ. ಯಾವ ಜಾಗದ ಕುರಿತು ಹೇಳ್ತಿದ್ದೇವೆ ಅನ್ನೋದು ಈಗಾಗ್ಲೇ ನಿಮಗೆ ಅರ್ಥವಾಗಿರುತ್ತೆ. ಬಿಡಿ. ಅಪರಾಧಿಗಳಿಗೆ ತನ್ನ ಶಿಕ್ಷೆ ಕೊಡಬೇಕಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ(Parappana Agrahara ), ಕೊಲೆ ಕೇಸ್‌ನನಲ್ಲಿ ಜೈಲು ಸೇರಿದವರನ್ನು ಉಗ್ರರನ್ನಾಗಿಸಿ ಕಳುಹಿಸಿದೆ. ಹೌದು, ನಮ್ಮ ದುರ್ದೈವಕ್ಕೆ ಪರಪ್ಪನ ಅಗ್ರಹಾರದಲ್ಲಿ ಉಗ್ರ ಶಿಕ್ಷಣ( terror education) ಕುರಿತು ನಿಮಗೆ ಹೇಳಬೇಕಾಗಿದೆ. ನೀವು ಸಹ ವಿಧಿಯಿಲ್ಲದ ಹೌದಾ, ಎಂದು ಉದ್ಘರಿಸಿ, ಕಣ್ಣು-ಕವಿ ಅರಳಿಸಿ, ಅಚ್ಚರಿಯಿಂದ ಈ ಉಗ್ರ ಶಿಕ್ಷಣ ಕುರಿತು ನೋಡಬೇಕಾಗಿದೆ. ಜೈಲು ಅಂತ ಯಾವುದನ್ನು ಕರೆಯುತ್ತಾರೆ, ಜೈಲಿಗೆ ಯಾರನ್ನು ಕಳಿಸಲಾಗುತ್ತೆ ಅನ್ನೋದು ಚಿಕ್ಕ ಮಕ್ಕಳಿಗೂ ಗೊತ್ತಿರುತ್ತೆ. ಆದ್ರೆ ಅದೇ ಜೈಲಿನಲಲ್ಲಿ ಈಗ ಉಗ್ರ ಶಿಕ್ಷಣ ನಡೆಯುತ್ತಿತ್ತು ಅನ್ನೋದು ನಮಗೆಲ್ಲ ಈಗ ತಿಳಿದುಬಂದಿದೆ. ಬೆಂಗಳೂರಿನ(Bengaluru) ಪರಪ್ಪನ ಅಗ್ರಹಾರದಲ್ಲಿ ಇದೆಲ್ಲ ನಡೆಯುತ್ತಿದೆ ಎಂದ್ರೆ ಈಗ್ಲೂ ನಂಬಲಾಗುತ್ತಿಲ್ಲ. ಜೈಲಿನಲ್ಲಿರುವ ಕೈದಿಗಳ ಕೈಗೆ ಮೊಬೈಲ್(Mobile) ಇರುತ್ತೆ, ಕೈದಿಗಳಿಗೆ ಸುಲಭವಾಗಿ ಗಾಂಜಾ , ಸಿಗರೇಟ್ , ಎಣ್ಣೆ ಸಿಗುತ್ತದೆ.

ಇದನ್ನೂ ವೀಕ್ಷಿಸಿ:  ಕಲಾಪದಲ್ಲಿ ನಡೆದೇ ಹೋಯ್ತು ಕೋಲಾಹಲ: ನೂಕಾಟ.. ತಳ್ಳಾಟ.. ಹೋರಾಟ..ನಂತರ ಏನಾಯ್ತು..?

Related Video