Asianet Suvarna News Asianet Suvarna News

ಕಲಾಪದಲ್ಲಿ ನಡೆದೇ ಹೋಯ್ತು ಕೋಲಾಹಲ: ನೂಕಾಟ.. ತಳ್ಳಾಟ.. ಹೋರಾಟ..ನಂತರ ಏನಾಯ್ತು..?

ವಿಪಕ್ಷಗಳ ಆರೋಪಕ್ಕೆ ಸರ್ಕಾರ ಹೇಳಿದ್ದೇನು..?
ಅಸಲಿ ಸಂಗತಿ ಪಕ್ಕಕ್ಕೆ..ರಾಜಕಾರಣ ಮುಂದಕ್ಕೆ!
ರಾಜ್ಯ ರಾಜಕೀಯದಲ್ಲಿ ಇದೆಂಥಾ ಆಸ್ಫೋಟ..!?

ಜುಲೈ 19 ಅಂದರೆ ಬುಧವಾರ ಕರ್ನಾಟಕದ ವಿಧಾನಸೌಧದೊಳಗೆ ಆಗಬಾರದ್ದು ಆಗಿಹೋಗಿತ್ತು. ಮಾತಿನ ಮನೆಯಾಗಬೇಕಿದ್ದ ಸದನ, ಕದನ ಭೂಮಿಯಾಗಿ ಬದಲಾಗಿತ್ತು. ಅಕ್ಷರಶಃ ಕುಸ್ತಿ ಅಖಾಡವೇನೋ ಅನ್ನೋ ಹಾಗಿತ್ತು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಬಿಜೆಪಿ,(BJP) ಜೆಡಿಎಸ್ ಪಕ್ಷಗಳ(JDS) ಕಾಂಗ್ರೆಸ್ ಪಕ್ಷದ(Congress) ಎದುರಿಗಿಟ್ಟಿದ್ದ ಸವಾಲು. ವಿಪಕ್ಷಗಳು ಕೇಳಿದ್ದ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಕೊಟ್ಟಿದ್ದಿದ್ರೆ, ಇಷ್ಟೆಲ್ಲಾ ಹೈಡ್ರಾಮ, ರಣರಾಜಕೀಯನೆಲ್ಲಾ ನೋಡೋ ಅವಶ್ಯಕತೆನೇ ಇರ್ಲಿಲ್ವೋ ಏನೋ ?. ಆದ್ರೆ, ಕಾಂಗ್ರೆಸ್ ನಾಯಕರು ತಮಗೆ ಎದುರಾದ ಪ್ರಶ್ನೆಗೆ ತಕ್ಕ ಉತ್ತರ ಕೊಡಲಿಲ್ಲ ಅನ್ನೋ ಅಸಮಾಧಾನ, ವಿಪಕ್ಷಗಳಿಗೆ ಎದುರಾಯ್ತು. ಅದರ ಬೆನ್ನಲ್ಲೇ ಕೋಲಾಹಲವೂ ಹೆಚ್ಚಾಯ್ತು. ಅದಾದ ಬಳಿಕ, ಸದನದೊಳಗಿಂದ, 10 ಮಂದಿ ಶಾಸಕರ ಅಮಾನತು  ಆಯ್ತು. ಅವರನ್ನ ಅಲ್ಲಿಂದ ಎತ್ತಿ ಆಚೆ ತಂದಿದ್ದೂ ಆಯ್ತು.

ಇದನ್ನೂ ವೀಕ್ಷಿಸಿ:  ಜೆಡಿಎಸ್‌ ನಿರ್ಧಾರದ ಮೇಲೆ ನಿಂತಿದೆಯಾ ಮೈತ್ರಿ ಭವಿಷ್ಯ..?: ಸಭೆ ಬಳಿಕ ಹೆಚ್‌ಡಿಡಿ ಹೇಳಿದ್ದೇನು ?