Asianet Suvarna News Asianet Suvarna News

Omicron Variant: ಆಫ್ರಿಕಾದಿಂದ ಬಂದ ಇಬ್ಬರಲ್ಲೂ' ಡೆಲ್ಟಾ' ವೈರಸ್; ‘ಒಮಿಕ್ರೋನ್‌’ ಅಲ್ಲ

ದಕ್ಷಿಣ ಆಫ್ರಿಕಾದಿಂದ (south Africa) ರಾಜ್ಯಕ್ಕೆ ಆಗಮಿಸಿರುವ ಇಬ್ಬರಲ್ಲಿ ಕೊರೋನಾ ಸೋಂಕು (corona Virus) ದೃಢಪಟ್ಟಿದ್ದು, ಇದು ಡೆಲ್ಟಾ (Delta) ಮಾದರಿಯಾಗಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

First Published Nov 29, 2021, 1:12 PM IST | Last Updated Nov 29, 2021, 1:14 PM IST

ಬೆಂಗಳೂರು (ನ. 29): ದಕ್ಷಿಣ ಆಫ್ರಿಕಾದಿಂದ (south Africa) ರಾಜ್ಯಕ್ಕೆ ಆಗಮಿಸಿರುವ ಇಬ್ಬರಲ್ಲಿ ಕೊರೋನಾ ಸೋಂಕು (corona Virus) ದೃಢಪಟ್ಟಿದ್ದು, ಇದು ಡೆಲ್ಟಾ (Delta) ಮಾದರಿಯಾಗಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

Omicron Variant: ಔಷಧಿಯೂ ಇಲ್ಲ, ವ್ಯಾಕ್ಸಿನ್‌ಗೂ ಬಗ್ಗಲ್ಲ, ರಾಜ್ಯಾದ್ಯಂತ ಹೈ ಅಲರ್ಟ್: ಸಿಎಂ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಕ್ಷಿಣ ಆಫ್ರಿಕಾದಿಂದ ಕಳೆದ 20 ದಿನಗಳಲ್ಲಿ 94 ಪ್ರಯಾಣಿಕರು ಆಗಮಿಸಿದ್ದು, ಈ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಬಗ್ಗೆ ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆ ನಡೆಸಿದ್ದು ಇದು ಪ್ರಸ್ತುತ ಆತಂಕ ಸೃಷ್ಟಿಸಿರುವ ಒಮಿಕ್ರೋನ್‌ ತಳಿ ಅಲ್ಲ. ಬದಲಿಗೆ ಈಗಾಗಲೇ ರಾಜ್ಯದಲ್ಲಿರುವ ಡೆಲ್ಟಾಮಾದರಿ ಎಂಬುದು ಸ್ಪಷ್ಟವಾಗಿದೆ. ಈ ಇಬ್ಬರೂ ದಕ್ಷಿಣ ಆಫ್ರಿಕಾದವರಾಗಿದ್ದು, ಒಬ್ಬರು ನ. 11ರಂದು, ಮತ್ತೊಬ್ಬರು ನ. 20ರಂದು ಬೆಂಗಳೂರಿಗೆ ಆಗಮಿಸಿದ್ದರು. ಇಬ್ಬರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Video Top Stories