Omicron Variant: ಔಷಧಿಯೂ ಇಲ್ಲ, ವ್ಯಾಕ್ಸಿನ್‌ಗೂ ಬಗ್ಗಲ್ಲ, ರಾಜ್ಯಾದಂತ ಹೈ ಅಲರ್ಟ್‌: ಸಿಎಂ

*  ಇಡೀ ಜಗತ್ತನ್ನೇ ನಡುಗಿಸಿದ ಒಮಿಕ್ರಾನ್‌ ವೈರಸ್‌
*  14 ದೇಶಗಳಿಗೆ ದಾಳಿ ಇಟ್ಟಿದ ಒಮಿಕ್ರಾನ್‌
*  ಕೇರಳದಿಂದ ಬಂದವರ ಮೇಲೆ ಹೆಚ್ಚಿನ ನಿಗಾ 

First Published Nov 29, 2021, 12:15 PM IST | Last Updated Nov 29, 2021, 12:15 PM IST

ತುಮಕೂರು(ನ.29): ಕೊರೋನಾ 3ನೇ ಅಲೆ ಬಗ್ಗೆ ನಾವು ನಿಗಾ ವಹಿಸಿದ್ದೇವೆ. ಕಂಟೈನ್ಮೆಂಟ್‌ ಝೋನ್‌ ಮೂಲಕ ನಿಯಂತ್ರಣಕ್ಕೆ ಪ್ರಯತ್ನಪಡುತ್ತಿದ್ದೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸ್ಯಾಂಪಲ್ಸ್‌ ಖಾತ್ರಿಪಡಿಸಿಕೊಳ್ಳಲು ಲ್ಯಾಬ್‌ಗೆ ಕಳುಹಿಸುತ್ತಿದ್ದೇವೆ. ವಿಮಾನ ನಿಲ್ದಾಣ, ಕೇರಳದಿಂದ ಬಂದವರ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದೇವೆ. ಶಾಲಾ, ಕಾಲೇಜುಗಳಲ್ಲೂ ಬಿಗಿ ಕ್ರಮಕ್ಕೆ ಸೂಚನೆಯನ್ನ ನೀಡಿದ್ದೇನೆ ಅಂತ ತಿಳಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಕೋವಿಡ್‌ ಟೆಸ್ಟ್‌ ಮಾಡಲಾಗುವುದು. ನೆಗೆಟಿವ್‌ ರಿಪೋರ್ಟ್‌ ಬಂದರಷ್ಟೇ ಆಚೆ ಬಿಡಲಾಗುವುದು ಎಂಬ ಕಠಿಣ ನಿರ್ಧಾರಕ್ಕೆ ಬರಲಾಗಿದೆ. ಈ ಒಮಿಕ್ರಾನ್‌ ವೈರಸ್‌ ಇಡೀ ಜಗತ್ತನ್ನೇ ನಡುಗಿಸಿದೆ. ಈಗಾಗಲೇ 14 ದೇಶಗಳಿಗೆ ಒಮಿಕ್ರಾನ್‌ ವೈರಸ್‌ ದಾಳಿ ಇಟ್ಟಿದೆ. 

Omicron Variant: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಮರೆತ ಜನರು