Asianet Suvarna News Asianet Suvarna News

ಹೇಗಿತ್ತು ಸೆಕೆಂಡ್ ಡೇ ಬೆಂಗಳೂರು ಕಂಬಳ..!? ಕಂಬಳದ ಕರೆಯಲ್ಲಿ ಕೋಣಗಳ ಜಬರ್ದಸ್ತ್ ಓಟ..!

ಕಾಂತಾರ ಕೋಣ ನೋಡಲು ಬಂದ ಬೆಂಗಳೂರು ಮಂದಿ..!
ಅರಮನೆ ಮೈದಾನದಲ್ಲಿ ಸೃಷ್ಟಿಯಾಯ್ತು ಮಿನಿ ಕರಾವಳಿ..!
100ಕ್ಕೂ ಹೆಚ್ಚು ಮೆಡಲ್ ಗೆದ್ದ ಬೋಳಾರ ತ್ರಿಶಾಲ್ ಕೆ ಕೋಣ..!

ಸಿಲಿಕಾನ್ ಸಿಟಿ ಮಂದಿಗೆ ವೀಕೆಂಡ್ ಬಂತ್ ಅಂದ್ರೆ ಸಾಕು, ಮಾಲು, ರೆಸಾರ್ಟ್‌, ಹೊಟೇಲ್‌ ಅಂತ ಸುತ್ತಿದ್ದವರಿಗೆ, ಈ ಸರ್ತಿ ಅರಮನೆ ಮೈದಾನದತ್ತ ದಾಂಗುಡಿ ಇಟ್ಟಿದ್ರು. ಕಾರಣ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ(Bengaluru) ನಮ್ಮ ಕಂಬಳ ಆಯೋಜನೆ ಮಾಡಲಾಗಿತ್ತು. ವೀಕೆಂಡ್‌ನಲ್ಲಿ ಕರಾವಳಿಯ ಗಂಡು ಕಲೆ ಕಂಬಳವನ್ನು(Kambala) ಕಣ್ತುಂಬಿಕೊಳ್ಳಲು ಕಾದಿದ್ದ ಸಿಲಿಕಾನ್ ಸಿಟಿ ಜನರಿಗೆ ಸಖತ್ ಮನರಂಜನೆ ಸಿಕ್ಕಿದೆ. ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರಲ್ಲಿ ನಡೆಯುತ್ತಿರುವ ಕಂಬಳದ ಮೊದಲ ದಿನದ ಝಲಕ್ ಅದ್ಭುತವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ತುಳುನಾಡಿನ ಕೋಣದ ಓಟದ ಸ್ಪರ್ಧೆಯನ್ನು ನೋಡಿ ಫುಲ್ ಫಿದಾ ಆಗಿದ್ದರು. ನಿನ್ನೆ ಆರಂಭವಾದ ನಮ್ಮ ಕಂಬಳ, ಇಂದು ಕ್ಲೈಮ್ಯಾಕ್ಸ್ನಲ್ಲಿ ಹಂತ ತಲುಪಿತು. ತುಳುನಾಡದ ಪೋರ್ಲು ಕಂಬಳ.. ಕರಾವಳಿ ಸೊಗಡು ರಾಜಧಾನಿಗೆ ಶಿಫ್ಟ್ ಆಗಿತ್ತು. ಕಂಬಳದ ಕಲರವಕ್ಕೆ ಅರಮನೆ ಮೈದಾನ ಸಾಕ್ಷಿಯಾಗಿತ್ತು. ಬೆಂಗಳೂರು ಕಂಬಳದಲ್ಲಿ ಅನಾವರಣಗೊಂಡಿದೆ ಕರಾವಳಿ ಸಂಸ್ಕೃತಿ. ಎಲ್ಲಿ ನೋಡಿದರೂ ಕೋಣಗಳ ಓಟ ನೋಡಲು ಬಂದವರದ್ದೇ ನೋಟ. ಭಾನುವಾರವೂ ಅರಮನೆ ಅಂಗಣದಲ್ಲಿ ಪ್ರಮುಖ ಸ್ಪರ್ಧೆಗಳ ಜತೆಗೆ ಅದನ್ನು ವೀಕ್ಷಿಸಲು ಬಂದ ಜನರ ಪ್ರೀತಿಯ ಒಡನಾಟ ಜೋರಾಗಿಯೇ ಇತ್ತು. ಈ ತುಳುನಾಡಿನ ಸಂಸ್ಕೃತಿ ಇತ್ತಿಚಿಗೆ ಕಾಂತಾರ ಸಿನಿಮಾದಿಂದಲೇ ಫುಲ್ ಫೇಮಸ್ ಆಗಿತ್ತು. ರಿಷಬ್ ಶೆಟ್ಟಿ ಮೊದಲು ಕಂಬಳದ ಮೂಲಕವೇ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ರು.

ಇದನ್ನೂ ವೀಕ್ಷಿಸಿ:  ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!

Video Top Stories