Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!

ದೊಡ್ಡ ಕೆಸರು ಗದ್ದೆ. ಅಲ್ಲಿ ಕೋಣಗಳ ಭರ್ಜರಿ ಓಟ. ಕೋಣದ ಓಟಕ್ಕೆ ಆಳೆತ್ತರಕ್ಕೆ ಹಾರೋ ಕೆಸರು. ಅಲ್ಲಿದ್ದವರೆಲ್ಲಾ ಈ ಕೋಣದ ಕಂಬಳ ನೋಡಿ ಒಂದು ಕ್ಷಣ ಥ್ರಿಲ್ ಆಗಿದ್ರು. ಶಿಳ್ಳೆ ಚಪ್ಪಾಳೆ ಹೊಡೆದು ಕೋಣಗಳಿಗೆ ಫುಲ್ ಝೋಶ್ ತುಂಬುತ್ತಿದ್ರು. 
 

ಕಂಬಳ ಅಂದ್ರೆ ನೆನಪಾಗೋದು ಕರಾವಳಿಯ ಮಂಗಳೂರು, ಉಡುಪಿ. ಆದ್ರೆ ಇನ್ಮುಂದೆ ಕಂಬಳ(Kambala) ಅಂದ್ರೆ ಕಣ್ಮುಂದೆ ಬರೋದು ನಮ್ಮ ಬೆಂಗಳೂರು. ಕಾರಾವಳಿಯ ಆಚರಣೆ ಕಂಬಳ ಫಸ್ಟ್ ದಿ ಫಸ್ಟ್ ಟೈಂ ಬೆಂಗಳೂರಿನಲ್ಲಿ(Bengaluru) ನಡೆದಿದೆ. 150 ಜೋಡಿ ಕೋಣಗಳು ಕೆಸರುಗದ್ದೆಯಲ್ಲಿ ನಾನಾ ನೀನಾ ಅಂತ ಸ್ಪರ್ಧೆಗೆ ಬಿದಿದ್ವು. ಈ ಕೋಣಗಳ ಓಟ ನೋಡೋಕೆ ಸಿಕ್ಕಾಪಟ್ಟೆ ತ್ರಿಲ್ ಆಗ್ತಿತ್ತು. ಕರಾವಳಿಗರ ಕಂಬಳ ಕಿಕ್ ಕೊಡೋಕೆ ಕಾರಣ ರಿಷಬ್ ಶೆಟ್ಟಿಯ(Rishabh Shetty) ಕಾಂತಾರ ಸಿನಿಮಾ. ಕಾಂತರದಲ್ಲಿ(Kantara) ಕಾಡುಬೆಟ್ಟದ ಶಿವ ಕಂಬಳ ಪಟುವಾಗಿದ್ದ ಶೆಟ್ರು ಕಂಬಳ ಮಾಡಿದ್ದನ್ನ ನೋಡಿ ವಾವ್ಹ್ ಅಂದಿದ್ರು. ಅಲ್ಲಿಂದ ಈ ಕಂಬಳದ ಕ್ರೇಜ್ ಹೆಚ್ಚಾಯ್ತು. ಇದರ ಫಲ ಕಂಬಳ ಈಗ ಬೆಂಗಳೂರಿಗೆ ಶಿಫ್ಟ್ ಆಗಿದೆ. ಕಂಬಳ ಕರಾವಳಿಗರ ಕ್ರೇಜ್. ಈ ಕ್ರೇಜ್ ಬೆಂಗಳೂರಿಗೆ ಶಿಫ್ಟ್ ಆಗ್ಬೇಕು ಅಂದ್ರೆ ಅದಕ್ಕೆ ಸೆಲೆಬ್ರೆಟಿಗಳ ಸಪೋರ್ಟ್ ಕೂಡ ಬೇಕು. ಈ ಕಂಬಳಕ್ಕೆ ಚಿತ್ರರಂಗದ ದಿಗ್ಗಜ ನಟ ನಟಿಯರು ಬರ್ತಾರೆ ಅಂತ ಕಂಬಳ ಆಯೋಜಕ ಅಶೋಕ್ ರೈ(Ashok Rai) ಹೇಳಿದ್ರು. ಆದ್ರೆ ಕೋಣಗಳ ಓಟದ ಮಧ್ಯೆ ನಮ್ಮ ಸ್ಟಾರ್ಸ್ಗಳನ್ನೂ ಕಣ್ತುಂಬಿಕೊಳ್ಳೋಣ ಅಂತ ಬಂದ ಹಲವರಿಗೆ ನಿರಾಸೆಯಾಗಿತ್ತು. ಎಷ್ಟೇ ಝೂಮ್ ಹಾಕಿದ್ರು ಕಂಬಳದಲ್ಲಿ ದೀಪಿಕಾ, ಐಶ್ವರ್ಯ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಕೆ ಎಲ್ ರಾಹುಲ್  ರಜನಿಕಾಂತ್ ಯಾರು ಕಾಣ್ಲೇ ಇಲ್ಲ.. ಅಶ್ವೀನಿ ಪುನೀತ್ ರಾಜ್ಕುಮಾರ್ ಕಂಬಳ ಉದ್ಘಾಟಿಸಿದ್ರು.ಎರಡು ದಿನ ನಡೆಯೋ ಕಂಬಳದಲ್ಲಿ ಬರೀ ಕೋ ಣಗಳು ಬಿಟ್ರೆ ಯಾವೊಬ್ಬ ಸ್ಟಾರ್ಸ್ಗಳು ಕಣ್ಣಿಗೆ ಬೀಳಲಿಲ್ಲ. ಆದ್ರೆ ನಾಳೆಯೂ ಕೋಣಗಳ ಓಟ ಇರೋದ್ರಿಂದ ಕೆಲ ಸ್ಟಾರ್ಗಳು ಬಂದ್ರು ಆಶ್ಚರ್ಯವೇನಿಲ್ಲ.

ಇದನ್ನೂ ವೀಕ್ಷಿಸಿ:  ಕೆಮಿಕಲ್ ಎಂಜಿನಿಯರಿಂಗ್ ಬಿಟ್ಟು ಯೋಧರಾಗಿದ್ದು ಯಾಕೆ..? 23 ಕಿಮೀ ಅಂತಿಮಯಾತ್ರೆ..ಎಲ್ಲೆಲ್ಲೂ ಜನಸಾಗರ..!