Asianet Suvarna News Asianet Suvarna News

ACB Raid: ಸುಟ್ಟರೂ ಹುಟ್ಟುಗುಣ ಹೋಗಲ್ಲ: ನಾಗರಾಜ ಲಂಚ ಬಿಡಲ್ಲ..!

*  ಐಎಂಎ ಕೇಸ್‌ನಲ್ಲಿ 4.5 ಕೋಟಿ ರೂ. ಲಂಚ ಪಡೆದಿದ್ದ ನಾಗರಾಜ 
*  ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ ಬಂದ ಭ್ರಷ್ಟ ಅಧಿಕಾರಿ
*  ನಾಗರಾಜ ಮನೆ ಮೇಲೆ ಮೂರು ಬಾರಿ ಬೇರೆ ಬೇರೆ ತನಿಖಾ ಸಂಸ್ಥೆಗಳಿಂದ ದಾಳಿ
 

Nov 25, 2021, 11:05 AM IST

ಬೆಂಗಳೂರು(ನ.25): ಭ್ರಷ್ಟ ಕೆಎಎಸ್‌ ಅಧಿಕಾರಿ ಎಲ್‌.ಸಿ. ನಾಗರಾಜ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ಬಾರಿ ದಾಳಿ ನಡೆದಿರೋದು ಮೂರನೇ ಬಾರಿ. ಹೌದು, ಈ ಹಿಂದೆ ಎರಡು ಬಾರಿ ದಾಳಿ ನಡೆದಿದ್ರೂ ಭಷ್ಟ ಅಧಿಕಾರಿಯ ಕುರ್ಚಿಗೆ ಮಾತ್ರ ಭಂಗ ಬಂದಿಲ್ಲ. 

ACB Raid: ಕಲಬುರಗಿ ಭ್ರಷ್ಟ ಅಧಿಕಾರಿ ಶಾಂತಗೌಡ ಅರೆಸ್ಟ್‌

ಮೂರು ಬಾರಿಯೂ ಬೇರೆ ಬೇರೆ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸಲಾಗಿದೆ. ನಾಗರಾಜ ಮನೆ ಮೇಲೆ ಮೊದಲು ಎಸ್‌ಐಟಿ ಟೀಂ ದಾಳಿ ನಡೆಸಿತ್ತು. ಎರಡನೇ ದಾಳಿ ನಡೆದಿದ್ದು ಸಿಬಿಐ, ಇದೀಗ ಮೂರನೇ ಬಾರಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗರಾಜ್‌ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಅಧಿಕಾರಿಯಾಗಿದ್ದಾನೆ. ಐಎಂಎ ಕೇಸ್‌ನಲ್ಲಿ 4.5 ಕೋಟಿ ರೂ. ಲಂಚ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ನಾಗರಾಜ ಲಂಚ ಪಡೆದಿದ್ದಕ್ಕೆ ಎಸ್‌ಐಟಿ ಸಾಕ್ಷ್ಯ ಸಂಗ್ರಹಿಸಿದೆ. ಐಎಂಎ ಕೇಸ್‌ನಲ್ಲಿ ನಾಗರಾಜ ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾರೆ.