Asianet Suvarna News Asianet Suvarna News

ACB Raid: ಕಲಬುರಗಿ ಭ್ರಷ್ಟ ಅಧಿಕಾರಿ ಶಾಂತಗೌಡ ಅರೆಸ್ಟ್‌

ಎಸಿಬಿ ತನಿಖೆಗೆ ಅಸಹಕಾರ ನೀಡಿದ್ದಕ್ಕೆ ಪಿಡಬ್ಲ್ಯೂಡಿ ಅಧಿಕಾರಿ ಶಾಂತಗೌಡ ಬಿರಾದಾರ ಅವರನ್ನ ಬಂಧಿಸಲಾಗಿದೆ.   ಶಾಂತಗೌಡ ಬಿರಾದಾರ ಅವರನ್ನ 14 ದಿನ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. 

ಕಲಬುರಗಿ(ನ.25): ಎಸಿಬಿ ತನಿಖೆಗೆ ಅಸಹಕಾರ ನೀಡಿದ್ದಕ್ಕೆ ಪಿಡಬ್ಲ್ಯೂಡಿ ಅಧಿಕಾರಿ ಶಾಂತಗೌಡ ಬಿರಾದಾರ ಅವರನ್ನ ಬಂಧಿಸಲಾಗಿದೆ.   ಶಾಂತಗೌಡ ಬಿರಾದಾರ ಅವರನ್ನ 14 ದಿನ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಎಸಿಬಿ ಅಧಿಕಾರಿಗಳು ದಾಳಿ ಮಾಡಿದ ವೇಳೆ 54 ಲಕ್ಷ ರೂ. ನಗದು ಸೇರಿ ಅಪಾರ ಅಕ್ರಮ ಆಸ್ತಿ ಶಾಂತಗೌಡ ಬಿರಾದಾರ ಮನೆಯಲ್ಲಿ ಪತ್ತೆಯಾಗಿತ್ತು. ಮನೆಯ ಬಾತ್‌ರೂಮ್‌ನ ಪೈಪ್‌, ಮನೆಯ ಶೀಲಿಂಗ್‌ನಲ್ಲಿ ಶಾಂತಗೌಡ ಹಣ ಇಟ್ಟಿದ್ದರು.

ACB Raid: ಶಿವಮೊಗ್ಗ ಕೃಷಿ ಇಲಾಖೆ ಅಧಿಕಾರಿ ಮನೆಯಲ್ಲ, ಚಿನ್ನದ ಖಜಾನೆ, ಅಧಿಕಾರಿಗಳು ತಬ್ಬಿಬ್ಬು!

ಶಾಂತಗೌಡ ಮನೆ ಜಾಲಾಡಿದ ಮೇಲೆ ಅವರ ಬ್ಯಾಂಕ್‌ ಅಕೌಂಟ್‌ ಮೇಲೆ ಕಣ್ಣಿಡಲಾಗಿದೆ. ಇಂದು ಬ್ಯಾಂಕ್‌ ಲಾಕರ್‌, ಬ್ಯಾಂಕ್‌ ಅಕೌಂಟ್‌ಗಳ ಪರಿಶೀಲನೆ ನಡೆಯಲಿದೆ. ಶಾಂತಗೌಡ ಅವರ ಕುಟುಂಬದವರ ಖಾತೆ, ಲಾಕರ್‌ಗಳ ಪರಿಶೀಲನೆ ಕೂಡ ನಡೆಯಲಿದೆ. 

Video Top Stories