ಅಪಘಾತ ಕೇಸ್ ಮುಚ್ಚಿ ಹಾಕಲು ಸವದಿ ಒತ್ತಡ ಹಾಕುತ್ತಿದ್ದಾರೆ; ಮೃತರ ಕುಟುಂಬಸ್ಥರ ಆರೋಪ

ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ.  ರಾಷ್ಟ್ರೀಯ ಹೆದ್ದಾರಿ 50 ಕೂಡಲಸಂಗಮ ಕ್ರಾಸ್ ಬಳಿ  ಘಟನೆ ನಡೆದಿದೆ.  ಕೂಡಲೆಪ್ಪ ಬೋಳಿ(58) ಮೃತ ಬೈಕ್ ಸವಾರ. 

First Published Jul 6, 2021, 10:16 AM IST | Last Updated Jul 6, 2021, 10:16 AM IST

ಬೆಂಗಳೂರು (ಜು. 06): ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ.  ರಾಷ್ಟ್ರೀಯ ಹೆದ್ದಾರಿ 50 ಕೂಡಲಸಂಗಮ ಕ್ರಾಸ್ ಬಳಿ  ಘಟನೆ ನಡೆದಿದೆ.  ಕೂಡಲೆಪ್ಪ ಬೋಳಿ(58) ಮೃತ ಬೈಕ್ ಸವಾರ. ಅಪಘಾತವಾದಾಗ ಚಿದಾನಂದ ಸವದಿ ಆ ಕಾರಿನಲ್ಲಿದ್ದರು. ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು. ಪೊಲೀಸರು ಚಿದಾನಂದ ಸವದಿಯವರನ್ನು ಬಚಾವ್ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ, ಸವಾರ ಸಾವು: ಚಿದಾನಂದ ಸವದಿ ಸ್ಪಷ್ಟನೆ

'ಈಗಲೂ ನಮ್ಮನ್ನು ಯಾರೂ ಸಂಪರ್ಕಿಸುತ್ತಿಲ್ಲ. ಪೊಲೀಸರು, ಅಧಿಕಾರಿಗಳಿಗೆ ಈ ಕೇಸನ್ನು ಮುಚ್ಚಿ ಹಾಕುವಂತೆ ಸವದಿ ಒತ್ತಡ ಹಾಕುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವಾಗಬಾರದು. ಸಾವಿಗೆ ನ್ಯಾಯ ಸಿಗಲೇಬೇಕು' ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.