ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್ ಗೆ ಡಿಕ್ಕಿ, ಸವಾರ ಸಾವು: ಚಿದಾನಂದ ಸವದಿ ಸ್ಪಷ್ಟನೆ

ಡಿಸಿಎಮ್ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಸ್ವತಃ ಚಿದಾನಂದ ಸವದಿ ಪ್ರತಿಕ್ರಿಯಿಸಿದ್ದಾರೆ.

First Published Jul 6, 2021, 9:39 AM IST | Last Updated Jul 6, 2021, 9:44 AM IST

ಬೆಂಗಳೂರು (ಜು. 06): ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವನ್ನಪ್ಪಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ೫೦ ಕೂಡಲಸಂಗಮ ಕ್ರಾಸ್ ಬಳಿ  ಘಟನೆ ನಡೆದಿದೆ.  ಕೂಡಲೆಪ್ಪ ಬೋಳಿ(58) ಮೃತ ಬೈಕ್ ಸವಾರ. ಕೂಡಲಪ್ಪ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಸ್ವತಃ ಚಿದಾನಂದ ಸವದಿ ಪ್ರತಿಕ್ರಿಯಿಸಿದ್ದಾರೆ. 'ಅಪಘಾತವಾದ ಕಾರಿನಲ್ಲಿ ನಾನಿರಲಿಲ್ಲ. ನನ್ನ ಸ್ನೇಹಿತನ ಕಾರಿನಲ್ಲಿ ಇದ್ದೆ. ನಮ್ಮ ಕಾರಿಗೂ, ಅಪಘಾತವಾದ ಕಾರಿಗೂ 30 ಕಿಮೀ ದೂರದಲ್ಲಿದ್ದೆವು. ಅಪಘಾತವಾದ ಕೂಡಲೇ, ನಮ್ಮ ಡ್ರೈವರ್ ಕರೆ ಮಾಡಿ ವಿವರಿಸಿದ್ದಾರೆ. ಕೂಡಲೇ ಆಂಬುಲೆನ್ಸ್, ಆಸ್ಪತ್ರೆಗೆ ವ್ಯವಸ್ಥೆ ಮಾಡಿದೆವು. ಆದರೆ ಬದುಕುಳಿಯಲಿಲ್ಲ' ಎಂದಿದ್ದಾರೆ.