Asianet Suvarna News Asianet Suvarna News

ಒಂದು ವಾರದಲ್ಲಿ ಬರಿದಾಗಲಿದೆ ಕೃಷ್ಣೆ: ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಟೆನ್ಶನ್

ಕೃಷ್ಣೆಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 3 ಟಿಎಂಸಿ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಅಲ್ಲಿನ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಸರ್ಕಾರ ಕ್ಯಾರೇ ಮಾಡದೇ ಬಾಯಿಮುಚ್ಚಿ ಕುಳಿತಿದ್ದು, ಇದು ಸಿದ್ದು ಸರ್ಕಾರಕ್ಕೆ ಹೊಸ ತಲೆನೋವನ್ನು ಸೃಷ್ಟಿಸಿದೆ

ಬೆಂಗಳೂರು: 135 ಸೀಟುಗಳ ಪೂರ್ಣ ಬಹುಮತದೊಂದಿಗೆ ಭರ್ಜರಿಯಾಗಿಯೇ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. ತಾನು ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರಂಟಿ ಭಾಗ್ಯಗಳ ಜಾರಿಯ ಚಿಂತೆ ಒಂದು ಕಡೆಯಾದರೆ ಮತ್ತೊಂದೆಡೆ ಬಿರು ಬೇಸಿಗೆಯಿಂದಾಗಿ ರಾಜ್ಯದ ಹಲವೆಡೆ ನೀರಿಗೆ ಹಾಹಾಕಾರವೆದ್ದಿದ್ದು, ನೀರಿನ ಸಮಸ್ಯೆ ಈಡೇರಿಸುವುದು ಕೂಡ ಚಿಂತೆಗೀಡುಮಾಡಿದೆ. ಒಂದು ವೇಳೆ ಇನ್ನೊಂದು ವಾರದಲ್ಲಿ ಮಳೆ ಬಾರದೇ ಹೋದರೆ ಉತ್ತರ ಕರ್ನಾಟಕ ಪಾಲಿನ ಜೀವನಾಡಿ ಎನಿಸಿರುವ ಕೃಷ್ಣೆಯ ಒಡಲು ಕೂಡ ಬರಿದಾಗಲಿದೆ. ಕೃಷ್ಣೆಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 3 ಟಿಎಂಸಿ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಅಲ್ಲಿನ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಸರ್ಕಾರ ಕ್ಯಾರೇ ಮಾಡದೇ ಬಾಯಿಮುಚ್ಚಿ ಕುಳಿತಿದ್ದು, ಇದು ಸಿದ್ದು ಸರ್ಕಾರಕ್ಕೆ ಹೊಸ ತಲೆನೋವನ್ನು ಸೃಷ್ಟಿಸಿದೆ ಈ ಬಗ್ಗೆ ಒಂದು ರೀಪೋರ್ಟ್ ಇಲ್ಲಿದೆ. 

Video Top Stories