Asianet Suvarna News Asianet Suvarna News

ನಂದಿನಿ ಹಾಲು ಮಾರಾಟ ಕುಸಿತ, ಹೆಚ್ಚುವರಿ ಹಾಲು ಖರೀದಿ ನಿಲ್ಲಿಸಲು ಕೆಎಂಎಫ್‌ ಚಿಂತನೆ!

May 29, 2021, 10:58 AM IST

ಬೆಂಗಳೂರು (ಮೇ. 29): ಲಾಕ್‌ಡೌನ್‌  ಹಿನ್ನೆಲೆಯಲ್ಲಿ ಒಂದು ಕಡೆ ನಂದಿನಿ ಹಾಲು ಮಾರಾಟ ಕುಸಿತ ಹಾಗೂ ಮತ್ತೊಂದು ಕಡೆ ಮಳೆ ಸುರಿದು ಹಸಿರು ಮೇವು ಹೆಚ್ಚಾಗಿ ಹಾಲು ಉತ್ಪಾದನೆ ಜಾಸ್ತಿಯಾಗಿರುವ ಪರಿಣಾಮ ರಾಜ್ಯದ 13 ಹಾಲು ಒಕ್ಕೂಟಗಳಲ್ಲಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಹೆಚ್ಚುತ್ತಿದೆ. ಸರ್ಕಾರ ಸಹಕರಿಸದಿದ್ದರೆ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲು ಖರೀದಿಯನ್ನು ಸ್ಥಗಿತಗೊಳಿಸಲು ಕೆಎಂಎಫ್‌ ಚಿಂತನೆ ನಡೆಸಿದೆ.

ಸೋಂಕಿತರ ನೆರವಿಗೆ 'ಮೈ ಸೇವಾ' ತಂಡ, ಪ್ರತಿ ಜಿಲ್ಲೆಗೂ ಸಿಗಲಿದೆ ಆಂಬುಲೆನ್ಸ್ ಸೇವೆ

1ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಕೆನೆಭರಿತ ಹಾಲಿನ ಪುಡಿ ನೀಡಲು ಸರ್ಕಾರ ಮುಂದೆ ಬರಬೇಕಿದೆ. ಇದರಿಂದ ಎರಡು ತಿಂಗಳಿಗೆ 92.32 ಕೋಟಿ ರು.ವೆಚ್ಚವಾಗಲಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕ್ಷೀರಭಾಗ್ಯ ಯೋಜನೆಗೆ 653 ಕೋಟಿ ನಿಗದಿಯಾಗಿದ್ದು ಅದನ್ನು ಬಳಸಿಕೊಂಡರೆ ಸಮಸ್ಯೆ ನಿವಾರಿಸಬಹುದು. 

Video Top Stories