ಸೋಂಕಿತರ ನೆರವಿಗೆ 'ಮೈ ಸೇವಾ' ತಂಡ, ಪ್ರತಿ ಜಿಲ್ಲೆಗೂ ಸಿಗಲಿದೆ ಆಂಬುಲೆನ್ಸ್ ಸೇವೆ
‘ಮೈ ಸೇವಾ’ ಉಚಿತ ಆ್ಯಂಬುಲೆನ್ಸ್ ಸೇವೆಗೆ ವಿಜಯೇಂದ್ರ ಚಾಲನೆ
- ಕೋವಿಡ್ ರೋಗಿಗಳಿಗೆ 24 ಗಂಟೆ ತುರ್ತು ನೆರವು ನೀಡಲು ತಂಡ ಸಿದ್ಧ
- ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಕೂಡ ಪೂರೈಕೆ
ಬೆಂಗಳೂರು (ಮೇ. 29): ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವವರು ಹಾಗೂ ಕೋವಿಡ್ ವಾರಿಯರ್ಸ್‌ಗೆ ಸಹಾಯ ಮಾಡುವ ಉದ್ದೇಶದಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ‘ಮೈ ಸೇವಾ’ ಎಂಬ ತಂಡವು ಸಿದ್ಧವಾಗಿದೆ. ' ಮೈ ಸೇವಾ' ಆಂಭುಲೆನ್ಸ್ ಸೇವೆಗೆ ವಿಜಯೇಂದ್ರ ಚಾಲನೆ ನೀಡಿದರು.
ಹಳ್ಳಿಗಳಲ್ಲಿ ಕೊರೋನಾ ಜಾಗೃತಿ ಮೂಡಿಸಲು ಮುಂದಾದ ವೈದ್ಯರು
ದಿನದ 24 ಗಂಟೆಗಳ ಕಾಲ ತಂಡವು ಬಡವರು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಇರುವವರ ಸಹಾಯಕ್ಕಾಗಿ ಆ್ಯಂಬುಲೆನ್ಸ್‌ಗಳೊಂದಿಗೆ ಸಿದ್ಧವಾಗಿರಲಿದೆ. ಆರಂಭಿಕ ಹಂತವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ 14 ಜಿಲ್ಲೆಗಳಲ್ಲಿ ಆ್ಯಂಬುಲೆನ್ಸ್ ಸೇವೆ ಸಮೇತ ತಂಡ ಕೆಲಸ ಮಾಡಲಿದೆ. ಬಳಿಕ ಇತರ ಜಿಲ್ಲೆಗಳಿಗೂ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ.