ಧರ್ಮ ಯೋಧರ, ಕೊರೋನಾ ಯುದ್ಧ: ಧರ್ಮ ಕ್ಷೇತ್ರಗಳೀಗ ಯುದ್ಧ ತಾಣ!
ಕೊರೋನಾ ಎರಡನೇ ಅಲೆ, ಈ ಮಹಾಮಾರಿ ಎಷ್ಟೊಂದು ಹಾವಳಿ ನಡೆಸಿದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಈ ಹೆಮ್ಮಾರಿಯ ಶರವೇಗದ ಅಬ್ಬರಕ್ಕೆ ಸರ್ಕಾರಗಳು ತತ್ತರಿಸಿ ಹೋಗಿವೆ. ಇನ್ನೇನು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನುವಾಗ ಕೆಲ ಸಮುದಾಯ ಹಾಗೂ ಧಾರ್ಮಿಕ ಕ್ಷೇತ್ರಗಳು ಸ್ವಇಚ್ಛೆಯಿಂದ ಮುಂದೆ ಬಂದು ಕೊರೋನಾ ವಿರುದ್ಧ ಹೋರಾಡುತ್ತಿವೆ.
ಬೆಂಗಳೂರು(ಮೇ.16): ಕೊರೋನಾ ಎರಡನೇ ಅಲೆ, ಈ ಮಹಾಮಾರಿ ಎಷ್ಟೊಂದು ಹಾವಳಿ ನಡೆಸಿದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಈ ಹೆಮ್ಮಾರಿಯ ಶರವೇಗದ ಅಬ್ಬರಕ್ಕೆ ಸರ್ಕಾರಗಳು ತತ್ತರಿಸಿ ಹೋಗಿವೆ. ಇನ್ನೇನು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನುವಾಗ ಕೆಲ ಸಮುದಾಯ ಹಾಗೂ ಧಾರ್ಮಿಕ ಕ್ಷೇತ್ರಗಳು ಸ್ವಇಚ್ಛೆಯಿಂದ ಮುಂದೆ ಬಂದು ಕೊರೋನಾ ವಿರುದ್ಧ ಹೋರಾಡುತ್ತಿವೆ.
ಹೌದು ಕೊರೊನಾ ಮಹಾಮಾರಿಗೆ ಹೆಸರಿ ಜನರು ತಮ್ಮವರಿಂದಲೇ ದೂರ ಸರಿಯುತ್ತಿದ್ದಾರೆ. ಸರ್ಕಾರವೂ ಅದೆಷ್ಟೇ ಯತ್ನಿಸಿದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಧಾರ್ಮಿಕ ಕ್ಷೇತ್ರಗಳೂ ಸಾಥ್ ನೀಡಿವೆ. ಸೋಂಕಿತರ ಆರೈಕೆಗಾಗಿ ಧಾರ್ಮಿಕ ಕ್ಷೇತ್ರದಲ್ಲೇ ಕೊರೋನಾ ಸೆಂಟರ್‌ಗಳನ್ನು ನಿರ್ಮಿಸಿದ್ದಾರೆ.