ಸಚಿವರೇ ಗಮನಿಸಿ; ನಿಮ್ಮ ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರೇ ಇಂಜೆಕ್ಷನ್ ಮಾಡ್ಕೋಬೇಕು.!
ಕೋವಿಡ್ ಸೋಂಕಿತರು ಹೆಚ್ಚುತ್ತಿದ್ದರೂ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರೇ ಇಂಜೆಕ್ಷನ್ ಮಾಡ್ಕೋಬೇಕು. ದಿನಕ್ಕೆ 2 ಬಾರಿ ನೆಪಕ್ಕೆ ವೈದ್ಯರು ಭೇಟಿ ಕೊಡುತ್ತಾರೆ.
ಬೆಂಗಳೂರು (ಸೆ. 14): ಕೋವಿಡ್ ಸೋಂಕಿತರು ಹೆಚ್ಚುತ್ತಿದ್ದರೂ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರೇ ಇಂಜೆಕ್ಷನ್ ಮಾಡ್ಕೋಬೇಕು. ದಿನಕ್ಕೆ 2 ಬಾರಿ ನೆಪಕ್ಕೆ ವೈದ್ಯರು ಭೇಟಿ ಕೊಡುತ್ತಾರೆ. ಇದು ಹಾವೇರಿ ಕೋವಿಡ್ ಸೆಂಟರ್‌ನ ದುಸ್ಥಿತಿ.
ಗುತ್ತಿಗೆದಾರರು- ಪಾಲಿಕೆ ಹಗ್ಗಜಗ್ಗಾಟ: ಆರೈಕೆ ಕೇಂದ್ರದಲ್ಲಿ ಕೊರೊನಾ ರೋಗಿಗಳ ಪರದಾಟ
ಒಬ್ಬ ರೋಗಿ ಬಳಸಿದ ಹಾಸಿಗೆ, ಬೆಡ್‌ಶೀಟನ್ನು ಇನ್ನೊಬ್ಬ ರೋಗಿಗೆ ಕೊಡುತ್ತಾರಂತೆ. ಆದರೂ ಅರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಸಚಿವರೂ ಕೂಡಾ ಈ ಬಗ್ಗೆ ಗಮನ ಕೊಡುತ್ತಿಲ್ಲ. ಇದು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿದೆ.