ಹಲಾಲ್‌ ಬೋರ್ಡ್‌ ತೆಗೆದ ನಂತರ ವ್ಯಾಪಾರ ಹೇಗಿದೆ? ಬಿರಿಯಾನಿ ಹೋಟೆಲ್‌ನೋರು ಹೇಳಿದ್ದಿಷ್ಟು

ಹಿಜಾಬ್ ಆಯ್ತು, ವ್ಯಾಪಾರ ಆಯ್ತು ಈಗ ಹಲಾಲ್ ದಂಗಲ್ಹಲಾಲ್ ಮಾಂಸ ಖರೀದಿಯ ವಿರುದ್ಧ ಅಭಿಯಾನರಾಜ್ಯದಲ್ಲಿ ಬಿರಿಯಾನಿ ಹೋಟೆಲ್ ಮಾಲೀಕರು ಹೇಳೋದೇನು?

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 30): ಹಿಜಾಬ್ (Hijab), ವ್ಯಾಪಾರ ಈ ಎಲ್ಲಾ ಸಂಘರ್ಷದ ಬಳಿಕ ಹಿಂದೂ ಮುಸ್ಲಿಮರ ನಡುವೆ ಹಲಾಲ್ (Halal) ಸಂಘರ್ಷ ಏರ್ಪಟ್ಟಿದೆ. ಮುಂಬರುವ ಯುಗಾದಿ (Yugadi) ಹಾಗೂ ಹೊಸತೊಡಕಿಗೆ ಸಂಬಂಧಪಟ್ಟಂತೆ ಹಿಂದೂಗಳು ಹಲಾಲ್ ಮಾಂಸ (Halal Meat) ಖರೀದಿಸಬಾರದು ಎನ್ನುವ ಅಭಿಯಾನ ಈಗಾಗಲೇ ರಾಜ್ಯದೆಲ್ಲೆಡೆ ಆರಂಭವಾಗಿದೆ. ಹಲಾಲ್ ಮಾಂಸ ಖರೀದಿಸೋದನ್ನ ಬಹಿಷ್ಕರಿಸಬೇಕು ಎಂದು ಬೆಂಗಳೂರಿನಲ್ಲಿ ಹಿಂದು ಜನಜಾಗೃತಿ ವೇದಿಕೆ ಕರೆ ಕೊಟ್ಟಿದೆ.

Add Asianetnews Kannada as a Preferred SourcegooglePreferred

ಈ ನಡುವೆ ವಿಜಯನಗರದ ಜಿಎಫ್ ಸಿ ಬಿರಿಯಾನಿ (GFC Biriyani) ಸೆಂಟರ್ ನ ಮಾಲೀಕ, ತಮ್ಮ ಮಳಿಗೆಗಳಲ್ಲಿ ಈಗಾಗಲೇ ಹಲಾಲ್ ಮಾಂಸವನ್ನು ಬಹಿಷ್ಕರಿಸಿದ್ದಾಗಿ ಹೇಳಿದ್ದಾರೆ. ಯಾರ ಒತ್ತಡದಿಂದಲೂ ನಾನು ಇದನ್ನು ಮಾಡಿಲ್ಲ. ಹಲಾಲ್ ಮಾಂಸ ಖರೀದಿಯನ್ನು ನಮ್ಮ ಮಳಿಗೆ ಬಂದ್ ಮಾಡಿದ ನಡುವೆಯೂ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ನಾವು ಭಾರತೀಯರು ಮೊದಲಿಗೆ ನಮ್ಮ ನೆಲದ ಕಾನೂನುಗೆ ಗೌರವ ಕೊಡುವುದನ್ನು ಎಲ್ಲರೂ ಕಲಿಯಬೇಕು ಎಂದು ಮಾಲೀಕ ರಾಜು ಹೇಳಿದ್ದಾರೆ.

ಹಲಾಲ್ ಮಾಂಸ ಅಂದ್ರೇನು? ಇದಕ್ಕೆ ಏಕೆ ವಿರೋಧ? ಇಲ್ಲಿದೆ ಸಂಪೂರ್ಣ ಮಾಹಿತಿ

ಹಲಾಲ್ ಬೋರ್ಡ್ ಇದ್ದ ದಿನಕ್ಕೂ ಇಲ್ಲದೇ ಇದ್ದ ದಿನಕ್ಕೂ ನನ್ನ ಮಳಿಗೆಯ ವ್ಯಾಪಾರದಲ್ಲಿ ಕೊಂಚವೂ ಬದಲಾವಣೆಯಾಗಿಲ್ಲ. ಎಂದಿನಂತೆ ವ್ಯಾಪಾರ ನಡೆಯುತ್ತಿದೆ. ನಾನೊಬ್ಬ ಭಾರತೀಯನಾಗಿ ಈ ನಿರ್ಧಾರ ಮಾಡಿದ್ದೇನಷ್ಟೇ ಎಂದು ಅವರು ಹೇಳಿದ್ದಾರೆ.

Related Video