ಹಲಾಲ್ ಮಾಂಸ ಅಂದ್ರೇನು? ಇದಕ್ಕೆ ಏಕೆ ವಿರೋಧ? ಇಲ್ಲಿದೆ ಸಂಪೂರ್ಣ ಮಾಹಿತಿ
* ಹಲಾಲ್ ಕಟ್ ಬಹಿಷ್ಕರಿಸಿ, ಜಟ್ಕಾ ಕಟ್ ಬಳ
* ಹಿಂದೂ ಜನಜಾಗೃತಿ ಸಮಿತಿ ಅಭಿಯಾನ
* ಹಲಾಲ್ ಮಾಂಸ ಅಂದ್ರೇನು? ಇದಕ್ಕೆ ಏಕೆ ವಿರೋಧ?
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮಾ.29): ಕರ್ನಾಟಕದಲ್ಲಿ ದಿನೇ ದಿನೇ ಧರ್ಮ ದಂಗಲ್ ಹೆಚ್ಚಾಗ್ತಾನೇ ಹೋಗ್ತಿದೆ. ಹಿಜಾಬ್ ವಿವಾದ (Hijab Row) ಭುಗಿಲೆದ್ದ ಬಳಿಕ ಹಿಂದೂ-ಮುಸ್ಲಿಂ ನಡುವಿನ ಸಾಮರಸ್ಯದ ಅಂತರ ಹೆಚ್ಚಾಗುತ್ತಾ ಸಾಗ್ತಿದೆ. ಈಗ ಹಲಾಲ್ ಬಹಿಷ್ಕಾರ ಅಭಿಯಾನ ಶುರುವಾಗಿದೆ. ಈ ಅಭಿಯಾನ ಯಾಕೆ ಶುರುವಾಯ್ತು. ಅಷ್ಟಕ್ಕೂ ಹಲಾಲ್ (Halal) ಅಂದರೆ ಏನು..?ನೋಡೋಣ ಬನ್ನಿ
ಏನಿದು ಹಲಾಲ್..?
ಒಂದು ಜೀವಂತವಾದ ಕುರಿ, ಕೋಳಿಯನ್ನ, ಅಥವಾ ಪ್ರಾಣಿಯ ಕತ್ತು ಕುಯ್ದು ದೇಹದ ರಕ್ತವನ್ನೆಲ್ಲ ಹೊರಗೆ ಚೆಲ್ಲಿಸಿ ಕೊಲ್ಲುವಂತ ವಿಧಾನ. ಹಲಾಲ್ ಮಾಡುವವನು ಓರ್ವ ಮುಸ್ಲಿಂ ಆಗಿರಬೇಕು. ಈ ಹಲಾಲ್ ಪ್ರಮಾಣ ಪತ್ರವನ್ನ ನೀಡುವುದು ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್. ಇದನ್ನ ಪಡೆಯಲು ಫೀಸ್ ಪಾವತಿ ಮಾಡಬೇಕಂತೆ. 30 ಸಾವಿರದಿಂದ 50 ಸಾವಿರದ ತನಕ ಹಣವನ್ನ ಹಲಾಲ್ ಸರ್ಟಿಫಿಕೇಟ್ ನೀಡಲು ಪಡೆಯಲಾಗುತ್ತದೆ ಎಂಬ ಮಾಹಿತಿ ಇದೆ.
ನಮಗೆ ಕೊಟ್ಟ ಕಿರುಕುಳ ಜನತೆ ಅನುಭವಿಸಬೇಕಿದೆ, ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ HDK
ಹಲಾಲ್ ಗೆ ವಿರೋಧ ಯಾಕೆ..?
ಯುಗಾದಿ ಮರುದಿನ ಹಿಂದೂಗಳಿಂದ ಹೊಸತೊಡಕು ಆಚರಣೆ ನಡೆಯುತ್ತೆ. ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ ಈ ಭಾಗಗಳಲ್ಲಿ ಹೊಸತೊಡಕು ಆಚರಣೆ ಜೋರು. ಈ ವೇಳೆ ಮಾಂಸಾಹಾರ ಸೇವನೆ ಹೆಚ್ಚು ನಡೆಯುತ್ತೆ. ಈ ಸಮಯದಲ್ಲಿ ಹಲಾಲ್ ಮಾಡಿದ ಮಾಂಸ ಖರೀದಿ ಮಾಡಬೇಡಿ ಎಂದು ಹಿಂದೂ ಜನಜಾಗೃತಿ ಸಮಿತಿ ಕರೆ ಕೊಟ್ಟಿದೆ. ಹಲಾಲ್ ಮಾಡಿದ ಮಾಂಸವನ್ನ ಅಲ್ಲಾನಿಗೆ ಅರ್ಪಣೆ ಮಾಡಿರ್ತಾರೆ. ಹಲಾಲ್ ಮಾಡುವಾಗ ಷರಿಯತ್ ನ ಆಯತ್ ಗಳನ್ನ ಹೇಳುತ್ತಾರೆ. ಹೀಗೆ ಹಲಾಲ್ ಮಾಡುವುದು ಅಲ್ಲಾನಿಗೆ ಅರ್ಪಣೆ ಮಾಡಿದಂತೆ ಹೀಗಾಗಿ ಹಲಾಲ್ ಮಾಡಿದ ಮಾಂಸವನ್ನ ಖರೀದಿ ಮಾಡಬೇಡಿ ಎಂದು ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷ ಮೋಹನ್ ಗೌಡ ಕರೆ ನೀಡಿದ್ದಾರೆ. ಹಲಾಲ್ ಸರ್ಟಿಫಿಕೇಟ್ ಗೆ ನೀಡುವ ಹಣ ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತೆ. ಹಿಂದೂ ವಿರೋಧಿ ಕಾರ್ಯಗಳಿಗೆ ಈ ಹಣವನ್ನ ಬಳಸುತ್ತಾರೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸುತ್ತಿದೆ. ಹೀಗಾಗಿ ಹಲಾಲ್ ಕಟ್ ಬಹಿಷ್ಕರಿಸಿ ಹಿಂದೂಗಳ ಜಟ್ಕಾ ಕಟ್ ಮಾಂಸವನ್ನ ಖರೀದಿಸಿ ಎಂದು ಕರೆ ನೀಡಲಾಗಿದೆ
ಹಲಾಲ್ ಬೋರ್ಡ್ ತೆರವು..!
ಹಲಾಲ್ ಬಹಿಷ್ಕಾರ ಮುಂದುವರೆದು, ಹಿಂದೂ ಹೋಟೆಲ್ ಗಳಲ್ಲಿ ಹಲಾಲ್ ಸರ್ಟಿಫಿಕೇಟ್ ಇರುವ ಬೋರ್ಡ್ ತೆರವುಗೊಳಿಸಲಾಗುತ್ತಿದೆ. ಹಿಂದೂ ಕಾರ್ಯಕರ್ತರು ಹೋಟೆಲ್ ಮಾಲೀಕರಿಗೆ ತಿಳಿ ಹೇಳಿ ಬೋರ್ಡ್ ತೆಗೆಸುತ್ತಿದ್ದಾರೆ. ಇಂಥದ್ದೇ ಒಂದು ಘಟನೆ ವೇಳೆ ವಿಜಯನಗರದಲ್ಲಿ ನಡೆದಿದೆ. ಜಿಎಫ್ ಸಿ ಬಿರಿಯಾನಿ ಸೆಂಟರ್ ಗೆ ಅಳವಡಿಸಿದ್ದ ಬೋರ್ಡ್ ನಲ್ಲಿ ಹಲಾಲ್ ಪದವನ್ನ ತೆಗೆಯಲಾಗಿದೆ.
ಈಗಾಗಲೇ ವಿಜಯನಗರದ ಎರಡು ಮೂರು ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ತೆಗೆಯಲಾಗಿದೆ. ಹೋಟೆಲ್ ಗಳಿಗೆ FSSAI ಕೊಡೋ ಸರ್ಟಿಫಿಕೇಟ್ ಉನ್ನತವಾದದ್ದು. ಇದರ ನಡುವೆ ಹಲಾಲ್ ಸರ್ಟಿಫಿಕೇಟ್ ಯಾಕೆ ಬೇಕು ಎಂಬುದು ಹಿಂದೂ ಕಾರ್ಯಕರ್ತರ ವಾದ. ಹಿಂದೂಗಳಿಗೆ ಹಲಾಲ್, ಹಲಾಲ್ ಅಲ್ಲದ ಪದಾರ್ಥಕ್ಕೆ ವ್ಯತ್ಯಾಸ ಇಲ್ಲ. ಆದರೆ ಮುಸಲ್ಮಾನರಿಗೆ ಮಾತ್ರ ಹಲಾಲ್ ಇಲ್ಲದೇ ಇರುವುದು ಹರಾಮ್ ಅಂತಾಗುತ್ತದೆ. ಹೀಗಿದ್ದಾಗ ನಮಗೇಕೆ ಹಲಾಲ್ ಮಾಡಿದ ಮಾಂಸ ಬೇಕು ಎಂದು ಹಿಂದೂ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಎಕನಾಮಿಕ್ ಜಿಹಾದ್ ಎಂದ ಸಿಟಿ ರವಿ
ಹಲಾಲ್ ಅನ್ನೋದು ಒಂದು ಆರ್ಥಿಕ ಜಿಹಾದ್. ಆರ್ಥಿಕ ಜಿಹಾದ್ ಅಂದ್ರೆ ಮುಸ್ಲಿಂರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತ ಅರ್ತ. ಹಲಾಲ್ ನ್ನ ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ ಎಂದು ಸಿಟಿ ರವಿ ಹೇಳಿದ್ದಾರೆ. ಹಲಾಲ್ ಮಾಂಸವನ್ನ ಉಪಯೋಗಿಸಬಾರದು ಅಂದ್ರೆ ತಪ್ಪೇನು ಎಂದೂ ಅವರು ಪ್ರಶ್ನಿಸಿದ್ದಾರೆ. ಹಲಾಲ್ ಮಾಂಸ ಉಪಯೋಗಿಸಿ ಎಂದು ಹೇಳುವ ರೈಟ್ಸ್ ಹೇಗೆ ಇದೆಯೋ ಹಾಗೇ ಅದನ್ನ ಬಹಿಷ್ಕರಿಸಿ ಅಂತ ಹೇಳುವ ರೈಟ್ಸ್ ನಮ್ಗೆ ಇದೆ. ಹಲಾಲ್ ಅಂದ್ರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತೆ. ಅದನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಅಂತೇನಾದ್ರು ಇದ್ಯಾ..?. ಸಾಮರಸ್ಯವನ್ನ ಹೇರೋದಕ್ಕೆ ಬರೋದಿಲ್ಲ ಹಾಗಂತ ಸಾಮರಸ್ಯ ಒನ್ ವೇ ಅಲ್ಲ ಅದು ಟೂ ವೇ ಆಗಿರಬೇಕು ಸಿಟಿ ರವಿ ಹೇಳಿದ್ದಾರೆ. ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ ನಮ್ಮ ದೇವರಿಗೆ ಎಂಜಲು. ಒಬ್ಬ ಹಿಂದು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಂರು ಬಂದು ತಗೋತಾರಾ? ಅಂತ ಸಿಟಿ ರವಿ ಹೇಳಿದ್ರು.