Anti Conversion Bill: ಲವ್ ಜಿಹಾದ್‌ಗೆ ಬ್ರೇಕ್, ಮತಾಂತರಕ್ಕೆ ನಿಷೇಧ, ಸರ್ಕಾರದ ಮೆಗಾಪ್ಲ್ಯಾನ್.?

'ಮತಾಂತರ, ಲವ್ ಜಿಹಾದ್ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಕಾಯ್ದೆಯನ್ನು ತರಬೇಕು. ಕಾಯ್ದೆಯನ್ನು ಸುಮ್ಮನೆ ತರಬಾರದು, ತಪ್ಪಿತಸ್ಥರು ನುಸುಳಿಕೊಂಡು ಹೋಗದಂತೆ ಕಠಿಣ ಕಾನೂನು ತರಬೇಕು' ಎಂದು ವಿಎಚ್‌ಪಿ ಮುಖಂಡ ಅಣ್ಣಯ್ಯ ವಿನಾಯಕ್ ಒತ್ತಾಯಿಸಿದ್ಧಾರೆ. 
 
First Published Dec 16, 2021, 11:00 AM IST | Last Updated Dec 16, 2021, 11:04 AM IST

ಬೆಂಗಳೂರು (ಡಿ. 16): ಇತ್ತೀಚೆಗೆ ರಾಜ್ಯ ಸೇರಿದಂತೆ ದೇಶದಲ್ಲಿ ಲವ್‌ ಜಿಹಾದ್‌, (Love Jihad) ಮತಾಂತರ  (Anti Conversion) ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ.

Anti Conversion Bill: ಮತಾಂತರ ನಿಷೇಧ ಕಾಯ್ದೆ ಬಿಲ್‌ನಲ್ಲೇ ಲವ್ ಜಿಹಾದ್‌ಗೆ ಕಡಿವಾಣ.?

ಮತಾಂತರ ನಿಷೇಧ ಕಾಯ್ದೆ ಜಾರಿ ಮತ್ತು ಲವ್‌ ಜಿಹಾದ್‌ ಕಡಿವಾಣಕ್ಕಾಗಿ ಆಗ್ರಹಿಸಿ ವಿಶ್ವ ಹಿಂದು ಪರಿಷತ್‌,ಭಜರಂಗ ದಳ ಮತ್ತು ಹಿಂದುಪರ ಸಂಘಟನೆ ಸಹಯೋಗದಲ್ಲಿ ಡಿ.17ರಂದು ಧಾರವಾಡದಲ್ಲಿ ಬೃಹತ್‌ ರ್ಯಾಲಿ ಹಮ್ಮಿಕೊಂಡಿದೆ. ಲವ್ ಜಿಹಾದ್ ತಡೆ ಮಸೂದೆಯನ್ನು, ಮತಾಂತರ ನಿಷೇಧ ಬಿಲ್‌ನಲ್ಲೇ ಸೇರ್ಪಡೆ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕುತ್ತಿವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿಯೂ ಚರ್ಚೆ ನಡೆದಿದೆ. 

'ಮತಾಂತರ, ಲವ್ ಜಿಹಾದ್ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಕಾಯ್ದೆಯನ್ನು ತರಬೇಕು. ಕಾಯ್ದೆಯನ್ನು ಸುಮ್ಮನೆ ತರಬಾರದು, ತಪ್ಪಿತಸ್ಥರು ನುಸುಳಿಕೊಂಡು ಹೋಗದಂತೆ ಕಠಿಣ ಕಾನೂನು ತರಬೇಕು' ಎಂದು ವಿಎಚ್‌ಪಿ ಮುಖಂಡ ಅಣ್ಣಯ್ಯ ವಿನಾಯಕ್ ಒತ್ತಾಯಿಸಿದ್ಧಾರೆ. 

Video Top Stories