ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಶಾಸಕರ ದೂರಿನ ಬೆನ್ನಲ್ಲೇ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ
ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದ್ದು, ಒಂದೇ ದಿನ 211 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದೆ.
ಪೊಲೀಸರ ವರ್ಗಾವಣೆ(Police Transfer) ಮಾಡುತ್ತಿಲ್ಲ ಎಂಬ ಶಾಸಕರ ದೂರಿನ ಬೆನ್ನಲ್ಲೇ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ದಕ್ಷಿಣ ವಲಯ IGP ಆದೇಶ ಹೊರಡಿಸಿದ್ದಾರೆ. ಪೊಲೀಸ್ ಇಲಾಖೆಗೆ (police department) ಬಹುದೊಡ್ಡ ಸರ್ಜರಿ ಮಾಡಲಾಗಿದ್ದು, 211 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ( inspector transfer ) ಮಾಡಲಾಗಿದೆ. ಪೊಲೀಸರ ವರ್ಗಾವಣೆ ಸಂಬಂಧ ಪೊಲೀಸ್ ಮಹಾನಿರ್ದೇಶಕರು ಹಾಗೂ ಗೃಹ ಸಚಿವ ಪರಮೇಶ್ವರ್ ಜತೆ ಸಿಎಂ ಭಾನುವಾರ ಸಭೆ ನಡೆಸಿದ್ದು, ಸಭೆ ಬೆನ್ನಲ್ಲೇ ಸಾಮೂಹಿಕ ವರ್ಗಾವಣೆ(Massive transfer) ಮಾಡಲಾಗಿದೆ. ಪೊಲೀಸ್ ಇನ್ ಸ್ಪೆಕ್ಟರ್ (ಸಿವಿಲ್) ವರ್ಗಾವಣೆ ಆದೇಶವು ತತ್‌ಕ್ಷಣದಿಂದ ಜಾರಿಗೆ ಬಂದಿದೆ. ಶಾಸಕರ ದೂರಿನ ಬೆನ್ನಲ್ಲೇ ಒಂದೇ ದಿನ 200ಕ್ಕೂ ಹೆಚ್ಚು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ವೀಕ್ಷಿಸಿ: ಮಾತನಾಡುವ ಭರದಲ್ಲಿ ನಾಲಿಗೆ ಹರಿಬಿಟ್ಟ ಮಾಜಿ ಸಚಿವ: ಉತ್ತರ ಕರ್ನಾಟಕ ನಾಯಕರ ಬಗ್ಗೆ ಹೀಗೆ ಹೇಳೋದಾ ?