ಮಾತನಾಡುವ ಭರದಲ್ಲಿ ನಾಲಿಗೆ ಹರಿಬಿಟ್ಟ ಮಾಜಿ ಸಚಿವ: ಉತ್ತರ ಕರ್ನಾಟಕ ನಾಯಕರ ಬಗ್ಗೆ ಹೀಗೆ ಹೇಳೋದಾ ?

ಮರ ಇಲ್ಲದೆ ಅಲ್ಲಿಯವರೆಲ್ಲಾ ಸುಟ್ಟು ಕರಕಲಾಗಿದ್ದಾರೆ. ನಮ್ಮ ಖರ್ಗೆಯವರನ್ನೇ ನೋಡಿದ್ರೆ ಗೊತ್ತಾಗಲ್ವಾ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
 

First Published Aug 2, 2023, 11:22 AM IST | Last Updated Aug 2, 2023, 11:22 AM IST

ಶಿವಮೊಗ್ಗದಲ್ಲಿ ಕಸ್ತೂರಿ ರಂಗನ್ ವರದಿ(Kasturi Rangan Report) ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ವೇಳೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ( Araga Gyanendra) ಆಡಿದ ಮಾತು ಈಗ ವಿವಾದ ಸೃಷ್ಟಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ( Mallikarjuna Kharge) ಹಾಗೂ ಸಚಿವ ಈಶ್ವರ್ ಖಂಡ್ರೆ ( Ishwar Khandre) ಬಗ್ಗೆ ಮಾತಾಡುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಮರಗಳೇ ಇಲ್ಲದ ಉತ್ತರ ಕರ್ನಾಟಕದ ನಾಯಕರು ಅರಣ್ಯ ಸಚಿವರಾಗಿದ್ದಾರೆ. ಅಲ್ಲಿಯವರೆಲ್ಲ ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆಯವರನ್ನೇ ನೋಡಿದ್ರೆ ಗೊತ್ತಾಗಲ್ವಾ ಎಂದಿದ್ದು, ಕಾಂಗ್ರೆಸ್ಸಿಗರ(Congress) ಕೆಂಗಣ್ಣಿಗೆ ಗುರಿಯಾಗಿದೆ. ಈ ಮೂಲಕ ಆರಗ ಜ್ಞಾನೇಂದ್ರ ಪ್ರತಿಭಟನೆ ವೇಳೆ ಯಡವಟ್ಟಿನ ಹೇಳಿಕೆ ನೀಡಿದ್ದಾರೆ. ಮಾಜಿ ಗೃಹ ಸಚಿವರು ಉತ್ತರ ಕರ್ನಾಟಕ ಸಚಿವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಡಿಕೆಶಿಯ ‘ಬ್ರ್ಯಾಂಡ್’ ಬೆಂಗಳೂರಿಗೆ ಮತ್ತಷ್ಟು ವೇಗ: ಸಿಲಿಕಾನ್ ಸಿಟಿ ಇತಿಹಾಸ ತಿಳಿಸಲು ‘ವೈಬ್ರೆಂಟ್’ ಆ್ಯಕ್ಷನ್

Video Top Stories