Asianet Suvarna News Asianet Suvarna News

Vikrant Rona: ಜಾಕ್ವೆಲೀನ್ ಅವ್ರ ಕುಣಿತವನ್ನ ಮತ್ತೆ ಮೊಬೈಲ್‌ನಲ್ಲಿ ನೋಡ್ಕೊತಿವಿ: ಯೋಗರಾಜ್ ಭಟ್

ತುಂಬಾ ಹತ್ತಿರದ ಜೀವ ಸುದೀಪ್. ಕಷ್ಟಕ್ಕೆ ಹಾಗೂ ಸುಖಕ್ಕೆ ಆಗುವವರು ಸುದೀಪ್. ಲಾಕ್‌ಡೌನ್‌ನಲ್ಲಿ ಕೊರೋನಾ ಇಲ್ಲದ ಜಾಗವನೆಲ್ಲಾ ಹುಡುಕಿ ಶೂಟ್ ಮಾಡಿದ್ದಾರೆ ಎಂದು ಯೋಗರಾಜ್ ಭಟ್ ವಿಕ್ರಾಂತ್​ ರೋಣ ಚಿತ್ರದ ಬಗ್ಗೆ ತಿಳಿಸಿದರು. 

First Published Jun 22, 2022, 11:50 PM IST | Last Updated Jun 22, 2022, 11:50 PM IST

ಓರಾಯನ್​ ಮಾಲ್​ನಲ್ಲಿ ಇಂದು 'ವಿಕ್ರಾಂತ್​ ರೋಣ' ಟ್ರೇಲರ್​​ ಲಾಂಚ್ ಕಾರ್ಯಕ್ರಮ ನಡೆಯಿತು. ಚಿತ್ರರಂಗದ ದಿಗ್ಗಜರು ಬಂದು ತ್ರಿಡಿಯಲ್ಲಿ ವಿಕ್ರಾಂತ್​ ರೋಣನ  ಟ್ರೇಲರ್​ ಕಣ್ಣು ತುಂಬಿಕೊಂಡರು. ಸಿನಿಮಾದ ಟ್ರೇಲರ್​ ನೋಡಿದ ಬಳಿಕ ಎಲ್ಲರೂ ವೇದಿಕೆ ಮೇಲೆ ಬಂದು ತಮ್ಮ ಅಭಿಪ್ರಾಯ ತಿಳಿಸಿದರು. ಈ ವೇಳೆ ನಿರ್ದೇಶಕ ಯೋಗರಾಜ್ ಭಟ್ ಟ್ರೇಲರ್ ಬಗ್ಗೆ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ತುಂಬಾ ಹತ್ತಿರದ ಜೀವ ಸುದೀಪ್. ಕಷ್ಟಕ್ಕೆ ಹಾಗೂ ಸುಖಕ್ಕೆ ಆಗುವವರು ಸುದೀಪ್. ಲಾಕ್‌ಡೌನ್‌ನಲ್ಲಿ ಕೊರೋನಾ ಇಲ್ಲದ ಜಾಗವನೆಲ್ಲಾ ಹುಡುಕಿ ಶೂಟ್ ಮಾಡಿದ್ದಾರೆ. ಜಾಕ್ವೆಲೀನ್ ಅವರ ಕುಣಿತವನ್ನ ಮತ್ತೆ ಮೊಬೈಲ್‌ನಲ್ಲಿ ನೋಡ್ಕೊತಿವಿ. ಒಬ್ಬ ಪ್ರೇಕ್ಷಕನಾಗಿ ಸಿನಿಮಾ ನೋಡಲು ಕಾದಿದ್ದಿನಿ. ಟ್ರೇಲರ್ ಕಣ್ ತುಂಬಿಕೊಂಡಂತೆ ಮನಸ್ಸು ತುಂಬಿಕೊಳ್ಳಿ ಸರ್ ಎಂದು ಯೋಗರಾಜ್ ಭಟ್ ತಿಳಿಸಿದರು. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies