Yellow Board: ಪ್ರದೀಪ್ ನಟನೆಯ 'ಯೆಲ್ಲೋ ಬೋರ್ಡ್' ಸಿನಿಮಾ ಹೇಗಿದೆ ಗೊತ್ತಾ?

ತ್ರಿಲೋಕ್​ ರೆಡ್ಡಿ ಆಕ್ಷನ್ ಕಟ್ ಹೇಳಿರುವ 'ಯೆಲ್ಲೋ ಬೋರ್ಡ್' ಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಸಾರ್ವಜನಿಕರನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ಜವಾಬ್ದಾರಿ ಹೊತ್ತ ಕ್ಯಾಬ್ ಚಾಲಕನ ಕಥೆ ನೋಡಿದ ಸಿನಿಮಂದಿ ಎಲ್ಲರೂ ಭರ್ಜರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ತ್ರಿಲೋಕ್​ ರೆಡ್ಡಿ (Trilok Reddy) ಆಕ್ಷನ್ ಕಟ್ ಹೇಳಿರುವ 'ಯೆಲ್ಲೋ ಬೋರ್ಡ್' (Yellow Board) ಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಸಾರ್ವಜನಿಕರನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ಜವಾಬ್ದಾರಿ ಹೊತ್ತ ಕ್ಯಾಬ್ ಚಾಲಕನ ಕಥೆ ನೋಡಿದ ಸಿನಿಮಂದಿ ಎಲ್ಲರೂ ಭರ್ಜರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ನಾಯಕ ಪ್ರದೀಪ್ (Pradeep) ಪ್ರೇಕ್ಷಕರ ರಿಯಾಕ್ಷನ್‌ ನೋಡಿ ಫುಲ್‌ ಖುಷ್‌ ಆಗಿದ್ದಾರೆ. ಅಹಲ್ಯಾ ಸುರೇಶ್, ಸ್ನೇಹಾ ಖುಷಿ, ಸಾಧು ಕೋಕಿಲ ಮುಂತಾದವರು ಈ ಚಿತ್ರದಲ್ಲಿ ​ಅಭಿನಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Yellow Board: ಪುನೀತ್-ಸುದೀಪ್ ಮೆಚ್ಚಿದ 'ಯೆಲ್ಲೋ ಬೋರ್ಡ್' ಸಿನಿಮಾ ರಿಲೀಸ್!

ಕ್ಯಾಬ್ ಚಾಲಕನ ಸುತ್ತ ಸುತ್ತುವ ಈ ಕಥೆ ಇದಾಗಿದೆ. ದಿನಗೂಲಿ ನೌಕರಿಯಲ್ಲಿ ತೊಡಗಿರುವ ಕ್ಯಾಬ್ ಡ್ರೈವರ್ ಗಳ ಜೀವನ ಈ ಚಿತ್ರದಲ್ಲಿದೆ. ಕ್ಯಾಬ್ ಚಾಲಕನ ಜವಾಬ್ದಾರಿ, ಸಮಾಜದಲ್ಲಿ ಮಹಿಳಾ ಸುರಕ್ಷತೆ ಕುರಿತ (Women Saftey) ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ. ಈ ಸಿನಿಮಾದಲ್ಲಿ ತುಂಬಾ ಇಂಟರೆಸ್ಟಿಂಗ್ ಆಗಿರೋದೆ ಅಪ್ಪು (Puneeth Rajkumar) ಹಾಡಿದ ಹಾಡು. ಮೊದಲ ಬಾರಿಗೆ ರ‍್ಯಾಪ್ ಸಾಂಗ್ ಹಾಡಿದ್ದಾರೆ. ಮಾತ್ರವಲ್ಲದೇ ಚಿತ್ರವನ್ನು ಕಿಚ್ಚ ಸುದೀಪ್ (Kiccha Sudeep) ಮೆಚ್ಚಿಕೊಂಡಿದ್ದಾರೆ. ಅದ್ವಿಕ್ ಸಂಗೀತ ನಿರ್ದೇಶನ, ಪ್ರವೀಣ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video